ಕರ್ನಾಟಕ

karnataka

ಬಸ್​​ ಸಂಚಾರ ಸ್ಥಗಿತ: ಉಪನಗರ ರೈಲ್ವೆ ತಡೆದ ನೂರಾರು ಪ್ರಯಾಣಿಕರು

By

Published : Jul 22, 2020, 6:45 PM IST

ರಾಜ್ಯ ಸಾರಿಗೆ ಬಸ್​​ಗಳ ಸೇವೆಯನ್ನು ಆರಂಭಿಸುವಂತೆ ಒತ್ತಾಯಿಸಿ ನೂರಾರು ಪ್ರಯಾಣಿಕರು, ಮುಂಬೈ ಉಪನಗರದ ನಲ್ಲಸೋಪರ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ರೈಲುಗಳ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.

Stranded Mumbai commuters block suburban train service
ಪ್ರತಿಭಟನೆ

ಫಾಲ್ಘರ್​​ (ಮಹಾರಾಷ್ಟ್ರ): ರಾಜ್ಯ ಸಾರಿಗೆ ಬಸ್​​ಗಳ ಸೇವೆ ಸ್ಥಗಿತಗೊಳಿಸಿದ ಕಾರಣ ಅಸಮಾಧಾನಗೊಂಡ ನೂರಾರು ಪ್ರಯಾಣಿಕರು, ಮುಂಬೈ ಉಪನಗರದ ನಲ್ಲಸೋಪರ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ರೈಲುಗಳ ಸಂಚಾರಕ್ಕೆ ಅಡ್ಡಿಪಡಿಸಿದರು ಎಂದು ರೈಲ್ವೆ ಪೊಲೀಸರು (ಜಿಆರ್​​​ಪಿ) ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್‌ಆರ್‌ಟಿಸಿ) ಬೆಳಗ್ಗೆಯಿಂದ ಮುಂಬೈಗೆ ತನ್ನ ಬಸ್‌ಗಳನ್ನು ಓಡಿಸುವುದನ್ನು ನಿಲ್ಲಿಸಿದೆ. ಬಸ್​​ ರಸ್ತೆಗಿಳಿಯದ ಕಾರಣ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ರೈಲುಗಳ ಸಂಚಾರಕ್ಕೆ ತಡೆಯೊಡ್ಡಿದರು. ಹೀಗಾಗಿ, ರೈಲುಗಳ ಮೂಲಕ ವಿವಿಧ ಖಾಸಗಿ ಕಂಪನಿಗಳ ನೌಕರರು, ಕೆಲಸಕ್ಕೆ ಹೋಗಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದರು.

ಸಾರ್ವಜನಿಕ ಬಸ್ ಸೇವೆ ಸ್ಥಗಿತಗೊಳಿಸಿದ್ದನ್ನು ವಿರೋಧಿಸಿ ರೈಲ್ವೆ ನಿಲ್ದಾಣದ ಹೊರಗೆ ಪ್ರತಿಭಟಿಸಿದರು ಮತ್ತು ನಂತರ ನಿಲ್ದಾಣದ ಆವರಣಕ್ಕೆ ಪ್ರವೇಶಿಸಿ ರೈಲುಗಳನ್ನು ನಿಲ್ಲಿಸಲು ಪ್ರಯತ್ನಿಸಿದರು ಎಂದು ಅಧಿಕಾರಿಯೊಬ್ಬರು ಹೇಳಿದರು. ಆಗ ಹೆಚ್ಚು ಪೊಲೀಸ್​ ಭದ್ರತೆಯನ್ನು ನಿಯೋಜಿಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ರೈಲು ಸೇವೆಗಳನ್ನು ಪುನಾರಂಭಿಸಲಾಗಿದೆ ಎಂದರು.

ABOUT THE AUTHOR

...view details