ಹೈದರಾಬಾದ್:ಶ್ರೀಶೈಲಂ ಅಣೆಕಟ್ಟಿನ ಜಲವಿದ್ಯುತ್ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಘಟನೆಯಲ್ಲಿ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶ್ರೀಶೈಲಂ ಅಗ್ನಿ ಅವಘಡ: ಮೃತರ ಸಂಖ್ಯೆ 9ಕ್ಕೆ ಏರಿಕೆ - ಶ್ರೀಶೈಲಂ ಅಣೆಕಟ್ಟಿನ ಜಲವಿದ್ಯುತ್ ಕೇಂದ್ರ
ತೆಲಂಗಾಣ-ಆಂಧ್ರಪ್ರದೇಶ ಗಡಿ ಭಾಗದಲ್ಲಿರುವ ಶ್ರೀಶೈಲಂ ಅಣೆಕಟ್ಟಿನ ಜಲವಿದ್ಯುತ್ ಕೇಂದ್ರದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಶ್ರೀಶೈಲಂ ಅಗ್ನಿ ಅವಘಡ
ಮೃತ 9 ಜನರ ಪೈಕಿ ಮೂವರು ವಿದ್ಯುತ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೆಲಂಗಾಣ ಮೂಲದ ಸಹಾಯಕ ಇಂಜಿನಿಯರ್ಗಳು. ಈ ಮೂವರನ್ನು ಮೋಹನ್ ಕುಮಾರ್, ಉಜ್ಮಾ ಫಾತೀಮಾ ಹಾಗೂ ಸುಂದರ್ ಎಂದು ಗುರುತಿಸಲಾಗಿದೆ ಎಂದು ನಾಗರ್ ಕರ್ನೂಲ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತೆಲಂಗಾಣ-ಆಂಧ್ರಪ್ರದೇಶ ಗಡಿ ಭಾಗದಲ್ಲಿರುವ ಶ್ರೀಶೈಲಂ ಅಣೆಕಟ್ಟಿನ ಜಲವಿದ್ಯುತ್ ಕೇಂದ್ರದಲ್ಲಿ ಗುರುವಾರ ರಾತ್ರಿ ಶಾರ್ಟ್-ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ವಿದ್ಯುತ್ ಕೇಂದ್ರದಲ್ಲಿ ಸಿಲುಕಿರುವ ಉಳಿದ ಸಿಬ್ಬಂದಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
Last Updated : Aug 21, 2020, 4:51 PM IST