ಕರ್ನಾಟಕ

karnataka

ETV Bharat / bharat

ವಿಶೇಷ: ಕೊರೊನಾದೊಂದಿಗಿನ ಯುದ್ಧದಲ್ಲಿ ಖಾಸಗಿ ಕಂಪನಿಗಳ ಪಾತ್ರವೆಷ್ಟು? - Sanitizer companies

ಮಾರಕ ಕೊರೊನಾ ಸೋಂಕು ತಗುಲದಂತೆ ನೋಡಿಕೊಳ್ಳಲು ಮುಖಗವಸುಗಳು, ಸ್ಯಾನಿಟೈಸರ್‌ಗಳು, ವೆಂಟಿಲೇಟರ್‌ಗಳು ಮತ್ತು ಪಿಪಿಇ ಕಿಟ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳನ್ನು ಪೂರೈಸಲು ಖಾಸಗಿ ಕಂಪನಿಗಳು ಸರ್ಕಾರಕ್ಕೆ ನೆರವಾಗಿವೆ.

Special: The role of private companies in fight with Corona
ವಿಶೇಷ: ಕೊರೊನಾದೊಂದಿಗಿನ ಯುದ್ಧದಲ್ಲಿ ಖಾಸಗಿ ಕಂಪನಿಗಳ ಪಾತ್ರ

By

Published : May 13, 2020, 2:18 PM IST

ಏಕಾಏಕಿ ಎಲ್ಲೆಡೆ ಹರಡುತ್ತಿರುವ ಕೊರೊನಾ ಇಡೀ ಜಗತ್ತೇ ಕ್ಷಣ ಕ್ಷಣಕ್ಕೂ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡಿದೆ. ಸರ್ಕಾರದ ದಿಟ್ಟ ನಿರ್ಧಾರಗಳಿಂದ, ನಿರ್ಣಾಯಕ ಹೆಜ್ಜೆಗಳಿಂದ ಮಾತ್ರವೇ ಸೋಂಕಿತರ ಜೀವಗಳನ್ನು ಉಳಿಸಲು ಸಾಧ್ಯ. ಈ ಸಮಯದಲ್ಲಿ, ಖಾಸಗಿ ಕಂಪನಿಗಳು ಸಹ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶದೊಂದಿಗೆ ನಿಂತು ಪ್ರಮುಖ ಪಾತ್ರವನ್ನು ವಹಿಸಿವೆ.

ಸೋಂಕು ತಡೆಯುವ ಮುಖಗವಸುಗಳು, ಸ್ಯಾನಿಟೈಸರ್‌ಗಳು, ವೆಂಟಿಲೇಟರ್‌ಗಳು ಮತ್ತು ಪಿಪಿಇ ಕಿಟ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವುಗಳನ್ನು ಪೂರೈಸಲು ಖಾಸಗಿ ಕಂಪನಿಗಳು ಸರ್ಕಾರಕ್ಕೆ ನೆರವಾಗಿವೆ.

ಗೌತಮ ಬುದ್ಧ ನಗರ ಮತ್ತು ಗಾಜಿಯಾಬಾದ್‌ನ ಅನೇಕ ಜವಳಿ ಕಾರ್ಖಾನೆಗಳು ಸುರಕ್ಷತಾ ಕಿಟ್‌ಗಳು, ಮುಖಗವಸುಗಳು ಮತ್ತು ಕೈಗವಸುಗಳನ್ನು ತಯಾರಿಸಲು ಪ್ರಾರಂಭಿಸಿವೆ. ನಾಸಿಕ್‌ನ ಕಂಪನಿಗಳು ಮತ್ತು ತಮಿಳುನಾಡಿನ ತಿರುಪುರ ಗಾರ್ಮೆಂಟ್ಸ್​​ಗಳು ಸುಮಾರು 100 - 150 ಕಂಪನಿಗಳು ಬೇಡಿಕೆಯನ್ನು ಪೂರೈಸಲು ಮುಖಗವಸುಗಳು ಮತ್ತು ಪಿಪಿಇ ಕಿಟ್‌ಗಳನ್ನು ತಯಾರಿಸಲು ಪ್ರಾರಂಭಿಸಿವೆ.

ವೆಂಟಿಲೇಟರ್:

ಭಾರತಕ್ಕೆ 75,000 ವೆಂಟಿಲೇಟರ್‌ಗಳ ಅಗತ್ಯವಿದೆ. ಸುಮಾರು 60,000 ವೆಂಟಿಲೇಟರ್‌ಗಳನ್ನು ಪೂರೈಸಲು ಒಂಬತ್ತು ದೇಶೀಯ ತಯಾರಕರನ್ನು ಆಯ್ಕೆ ಮಾಡಲಾಯಿತು. ವೆಂಟಿಲೇಟರ್‌ಗಳನ್ನು ತಯಾರಿಸುವ ಹೊಸ ಕಂಪನಿಗಳಲ್ಲಿ, ಸನ್ ರೇ ಟೆಕ್ನಾಲಜಿ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ 30,000 ವೆಂಟಿಲೇಟರ್‌ಗಳನ್ನು ತಯಾರಿಸಿದರೆ, ಎಎಮ್‌ಟಿಝಡ್ ಮತ್ತು ಆಗ್ವಾ ಕ್ರಮವಾಗಿ 13,500 ಮತ್ತು 10,000 ವೆಂಟಿಲೇಟರ್ ಪೂರೈಕೆ ಮಾಡುವುದಾಗಿ ಒಪ್ಪಿಕೊಂಡಿವೆ. ಕಡಿಮೆ ಬೆಲೆಯ ಮ್ಯಾನುಯಲ್ ವೆಂಟಿಲೇಟರ್‌ಗಳ ಸ್ವಯಂಚಾಲಿತ ಆವೃತ್ತಿಯನ್ನು ಉತ್ಪಾದಿಸುವ ಬಯೋಡಿಸೈನ್ ಇನ್ನೋವೇಷನ್ ಲ್ಯಾಬ್, ಕಣ್ಣಿನ ಉಪಕರಣಗಳ ತಯಾರಕರಾದ ರೆಮಿಡಿಯೊ ಜೊತೆ ಒಪ್ಪಂದ ಮಾಡಿಕೊಂಡಿದೆ.

ಲಸಿಕೆ ತಯಾರಿಕಾ ಕಂಪನಿಗಳು:

ಕೊರೊನಾಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತೀಯ ಕಂಪನಿಗಳು ಮುಂಚೂಣಿಯಲ್ಲಿವೆ. ಸೀರಮ್ ಇನ್ಸ್ಟಿಟ್ಯೂಟ್, ಜೈವಿಕ್-ಇ, ಭಾರತ್ ಬಯೋಟೆಕ್, ಇಂಡಿಯನ್ ಇಮ್ಯುನೊಲಾಜಿಕಲ್ಸ್ ಮತ್ತು ಮಿನ್ ವ್ಯಾಕ್ಸ್ ಕಂಪನಿಗಳು ಸಹ ವೆಸ್ಸಿನ್ ಅನ್ನು ಅಭಿವೃದ್ಧಿಪಡಿಸುತ್ತಿವೆ.

ಪಿಪಿಇ ಕಿಟ್‌ ತಯಾರಕರು:

ಕೊರೊನಾ ಸಾಂಕ್ರಾಮಿಕಕ್ಕೆ ಮುಂಚಿತವಾಗಿ ಭಾರತ ಪಿಪಿಇ ಕಿಟ್​ ಅಥವಾ ವೈಯಕ್ತಿಕ ರಕ್ಷಣಾ ಸಾಧನಗಳನ್ನು ತಯಾರಿಸಲಿಲ್ಲ. ಆದರೆ, ಕೊರೊನಾದ ಭಾರತಕ್ಕೆ ಕಾಲಿಟ್ಟ ನಂತರ ಹಲವಾರು ಕಂಪನಿಗಳು ಲಕ್ಷಗಟ್ಟಲೆ ಕಿಟ್​ಗಳನ್ನು ತಯಾರಿಸುತ್ತಿವೆ. ಅಲೋಕ್ ಇಂಡಸ್ಟ್ರೀಸ್, ಜೆಸಿಟಿ ಫಾಗ್ವಾರಾ, ಗೋಕುಲ್​ದಾಸ್​ ಎಕ್ಸ್‌ಪೋರ್ಟ್ಸ್, ಆದಿತ್ಯ ಬಿರ್ಲಾ ಮುಂತಾದ ಕಂಪನಿಗಳು ಈ ಪಟ್ಟಿಯಲ್ಲಿವೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರವು ಸುಮಾರು 21.32 ಲಕ್ಷ ಪಿಪಿಇ ಕಿಟ್‌ಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಿದೆ. ಹಾಗೇ ಕನಿಷ್ಠ 15.96 ಲಕ್ಷ ಪಿಪಿಇ ಕಿಟ್‌ಗಳು ಕೇಂದ್ರ-ರಾಜ್ಯ ಬಫರ್ ಸ್ಟಾಕ್‌ನಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿ ಹೇಳಿದರು

ಮಾಸ್ಕ್​/ ಮುಖಗವಸುಗಳು:

27.2 ಮಿಲಿಯನ್ ಮುಖಗವಸುಗಳು ಅವಶ್ಯಕತೆಯಿದ್ದು, 12.8 ಮಿಲಿಯನ್ ಮುಖಗವಸುಗಳ ಬೇಡಿಕೆಯನ್ನು ಮೂರು ದೇಶೀಯ ತಯಾರಕರು ಪೂರೈಸುತ್ತಿವೆ.

ಸ್ಯಾನಿಟೈಸರ್:

ಏಪ್ರಿಲ್ 17-14ರಲ್ಲಿ ಶೇ 58ರಷ್ಟಿದ್ದ ಸ್ಯಾನಿಟೈಸರ್​ ಬೇಡಿಕೆ ಏಪ್ರಿಲ್ 10-14ರ ವೇಳೆಗೆ ಶೇ 87 ಕ್ಕೆ ಏರಿದೆ. ಅದರ ನಂತರ ಎಟಿಸಿ ಲಿಮಿಟೆಡ್, ಡಾಬರ್ ಇಂಡಿಯಾ, ಮಾರಿಕೊ ಲಿಮಿಟೆಡ್, ಇಮಾಮಿ ಲಿಮಿಟೆಡ್, ಜ್ಯೋತಿ ಲ್ಯಾಬ್ ಲಿಮಿಟೆಡ್ ಮತ್ತು ವೈನ್ ತಯಾರಕ ಡಿಯಾಗೋ ಇಂಡಿಯಾದಂತಹ ಕಂಪನಿಗಳು ಸ್ಯಾನಿಟೈಸರ್‌ಗಳನ್ನು ತಯಾರಿಸಲು ಪ್ರಾರಂಭಿಸಿವೆ.

ABOUT THE AUTHOR

...view details