ಮುಂಬೈ:ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ನಂಟು ಆರೋಪದಲ್ಲಿ ಬಂಧನವಾಗಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿಗೆ ಮುಂಬೈನ ಎನ್ಡಿಪಿಎಸ್ ಕೋರ್ಟ್ ಜಾಮೀನು ನೀಡಿದೆ.
ಸುಮಾರು ಮೂರು ತಿಂಗಳ ನಂತರ ಶೋವಿಕ್ಗೆ ಜಾಮೀನು ದೊರೆತಿದ್ದು, ಸೆಪ್ಟೆಂಬರ್ 4ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶೋವಿಕ್ನನ್ನು ಬಂಧಿಸಿತ್ತು. ನವೆಂಬರ್ನಲ್ಲಿ ಶೋವಿಕ್ ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.