ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ರಾಬರ್ಟ್ ವಾದ್ರಾಗೆ ಬಿಗ್ ರಿಲೀಫ್ ಸಿಕ್ಕಿದೆ. ಇದೇ ವೇಳೆ, ವಾದ್ರಾ ಅವರ ಆಪ್ತ ಮನೋಜ್ ಅರೋರಾಗೂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ರಾಬರ್ಟ್ ವಾದ್ರಾಗೆ ಬಿಗ್ ರಿಲೀಫ್: ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಬೇಲ್
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ರಾಬರ್ಟ್ ವಾದ್ರಾಗೆ ಬಿಗ್ ರಿಲೀಫ್ ಸಿಕ್ಕಿದೆ.
ರಾಬರ್ಟ್ ವಾದ್ರಾ ಈ ಪ್ರಕರಣದಲ್ಲಿ ಇದುವರೆಗೂ ಮಧ್ಯಂತರ ನಿರೀಕ್ಷಣಾ ಜಾಮೀನಿನ ಮೂಲಕ ಹೊರಗಡೆ ಇದ್ದರು. ರಾಬರ್ಟ್ ವಾದ್ರಾ ಹಾಗೂ ಮನೋಜ್ ಅರೋರಾ ತಲಾ 5 ಲಕ್ಷ ರೂ. ಬಾಂಡ್ ನೀಡುವಂತೆ ಕೋರ್ಟ್ ಆದೇಶಿಸಿದೆ.
ವಾದ್ರಾ ತನಿಖೆಗೆ ಸಹಕರಿಸುತ್ತಿಲ್ಲ, ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಇಡಿ ವಕೀಲರು ಕೋರ್ಟ್ ಮುಂದೆ ವಾದ ಮಂಡನೆ ಮಾಡಿದ್ದರು. ತಮ್ಮ ಬಳಿ ಬಂಧನಕ್ಕೆ ಬೇಕಾಗುವಷ್ಟು ಸಾಕ್ಷ್ಯಗಳಿವೆ ಎಂದು ಇಡಿ ಪರ ವಕೀಲರು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು. ಆದರೆ, ಜಡ್ಜ್ ವಾದ್ರಾಗೆ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದೆ. ಇದರಿಂದ ಬಂಧನದ ಭೀತಿಯಲ್ಲಿದ್ದ ವಾದ್ರಾ ನಿಟ್ಟುಸಿರು ಬಿಟ್ಟಿದ್ದಾರೆ.