ಕರ್ನಾಟಕ

karnataka

ETV Bharat / bharat

ಎಸ್ಪಿಬಿ ಆರೋಗ್ಯ ಸ್ಥಿತಿ ತೀರಾ ಗಂಭೀರ: ಹೆಲ್ತ್​ ಬುಲೆಟಿನ್​ ರಿಲೀಸ್​​ - ಗಾಯಕ ಎಸ್​​ಪಿಬಿ ಆರೋಗ್ಯ ಸ್ಥಿತಿ ಗಂಭೀರ

ಚೆನ್ನೈನ ಎಂಜಿಎಂ ಹೆಲ್ತ್​ ಕೇರ್​​​ನಲ್ಲಿ ಖ್ಯಾತ ಗಾಯಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

SP Balasubrahmanyam
SP Balasubrahmanyam

By

Published : Sep 24, 2020, 7:09 PM IST

Updated : Sep 24, 2020, 7:17 PM IST

ಚೆನ್ನೈ:ಅನಾರೋಗ್ಯದ ಕಾರಣ ಆಗಸ್ಟ್​​​ 5ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಖ್ಯಾತ ಹಿನ್ನೆಲೆ ಗಾಯಕ ಎಸ್​.ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಹೆಲ್ತ್​ ಬುಲೆಟಿನ್​ ಪ್ರಕಟ ಮಾಡಿದೆ.

ವೆಂಟಿಲೇಟರ್​ ಹಾಗೂ ಎಕ್ಮೋ ಮಷಿನ್​​ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್ಪಿಬಿ ಆರೋಗ್ಯ ಸ್ಥಿತಿ ತೀರಾ ಗಂಭೀರ

ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಸೂಕ್ಷ್ಮವಾಗಿ ಗಮನ ಇಟ್ಟಿದೆ ಎಂದು ಹೇಳಿದೆ. ಆಗಸ್ಟ್​ 5ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್​​ಪಿಬಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ ಆಗಸ್ಟ್​ 13ರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ವೆಂಟಿಲೇಟರ್​ ಹಾಗೂ ಎಕ್ಮೋ ಮಷಿನ್​ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ನುರಿತ ಸಿಬ್ಬಂದಿ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಯುಎಸ್​ ಹಾಗೂ ಯುಕೆ ವೈದ್ಯರಿಂದಲೂ ಸೂಕ್ತ ಮಾಹಿತಿ ಪಡೆದುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಈ ಹಿಂದೆ ಮಾಹಿತಿ ನೀಡಿದೆ.

Last Updated : Sep 24, 2020, 7:17 PM IST

ABOUT THE AUTHOR

...view details