ಕರ್ನಾಟಕ

karnataka

ETV Bharat / bharat

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್​ ಇನ್ನಿಲ್ಲ - ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್

ಕಳೆದ ಕೆಲ ದಿನಗಳಿಂದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್​ ನಿಧನರಾಗಿದ್ದಾರೆ.

social worker Swami Agnivesh
social worker Swami Agnivesh

By

Published : Sep 11, 2020, 8:37 PM IST

ನವದೆಹಲಿ:ಆರ್ಯ ಸಮಾಜದ ನಾಯಕ, ಹಿರಿಯ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್​​​(80) ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ಚಿಕಿತ್ಸೆಗಾಗಿ ಐಎಸ್​ಬಿಎಸ್​​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

80 ವರ್ಷದ ಅಗ್ನಿವೇಶ್​​ ಹರಿಯಾಣದ ಮಾಜಿ ಶಾಸಕರಾಗಿದ್ದು, 1970ರಲ್ಲಿ ಆರ್ಯ ಸಮಾಜದ ತತ್ವಗಳ ಆಧಾರದ ಮೇಲೆ ಆರ್ಯ ಸಭಾ ಪಕ್ಷ ಸ್ಥಾಪಿಸಿದ್ದರು. 1979ರಲ್ಲಿ ಕ್ಯಾಬಿನೆಟ್​​ ಸಚಿವರಾಗಿ ಹರಿಯಾಣದಲ್ಲಿ ಸೇವೆ ಸಲ್ಲಿಸಿದ್ದು, ಇವರನ್ನ ಎರಡು ಸಲ ಬಂಧನ ಮಾಡಿ, 14 ತಿಂಗಳ ಕಾಲ ಜೈಲಿನಲ್ಲಿಡಲಾಗಿತ್ತು.

ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಸೆಪ್ಟೆಂಬರ್ 21, 1939 ರಂದು ಜನಿಸಿದರು. ನಾಲ್ಕನೆಯ ವಯಸ್ಸಿನಲ್ಲಿ ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಕೆ ಮಾಡಲು ಬಂದಾಗ ಅವರ ಮೇಲೆ ಹಲ್ಲೆ ನಡೆದಿತ್ತು.

ABOUT THE AUTHOR

...view details