ನ್ಯೂಯಾರ್ಕ್: ನವಜಾತ ಶಿಶುವೊಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದೆ. ಕೇವಲ ಆರು ವಾರಗಳ ಮಗುವೊಂದು ಸೋಂಕಿಗೆ ಮೃತಪಟ್ಟಿರೋದು ಇದೇ ಮೊದಲು ಎಂದು ಅಮೆರಿಕದ ಕನೆಕ್ಟಿಕಟ್ ರಾಜ್ಯ ಗವರ್ನರ್ ನೆಡ್ ಲ್ಯಾಮಂಟ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಗುರವಾರ ಟ್ವೀಟ್ ಮಾಡಿರುವ ಅವರು, ಹಿಂದಿನ ರಾತ್ರಿ ಮಗುವಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಜನತೆ ಕೊರೊನಾ ಬಗ್ಗೆ ಜಾಗ್ರತೆಯಿಂದಿರಬೇಕು ಎಂದಿದ್ದಾರೆ.
ಮಗುವಿನ ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ಇಲಿನಾಯ್ಸ್ ಪ್ರಾಧಿಕಾರ ಈ ಪ್ರಕರಣ ಮನಕಲಕುವಂತಿದ್ದು, ಈ ಬಗ್ಗೆ ತನಿಖೆ ನಡೆಯಲಿದೆ ಎಂದಿದ್ದಾರೆ. ಅಲ್ಲಿನ ಸ್ಥಳೀಯ ಮಾಧ್ಯಮಗಳು ಮಗುವಿಗೆ 9 ತಿಂಗಳಾಗಿತ್ತು ಎಂದು ಸುದ್ದಿಪ್ರಸಾರ ಮಾಡಿವೆ.
ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಈವರೆಗೂ ಅಮೆರಿಕವೊಂದರಲ್ಲೇ 4,400ಕ್ಕೂ ಹೆಚ್ಚು ಬಲಿ ತೆಗೆದೆಕೊಂಡಿದೆ. ಈವರೆಗೂ ವಯಸ್ಸಾದವರಿಗೆ ಆತಂಕವಾಗಿ ಕಾಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಮಗುವಿನ ಸಾವಿನಿಂದ ಅಭಿಪ್ರಾಯ ಬದಲಾಗುವ ಸಾಧ್ಯತೆಯಿದೆ.
ಸದ್ಯಕ್ಕೆ ನ್ಯೂಯಾರ್ಕ್, ಕನೆಕ್ಟಿಕಟ್ ಹಾಗೂ ನ್ಯೂಜೆರ್ಸಿ ಸೇರಿದಂತೆ ಹಲವು ನಗರಗಳ ಜನತೆಗೆ ಮನೆಯಲ್ಲಿಯೇ ಇರುವಂತೆ ಸರ್ಕಾರ ಆದೇಶಿಸಿದೆ. ಅನೇಕ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಂಡಿದೆ.