ಹೈದರಾಬಾದ್ (ತೆಲಂಗಾಣ):ಇಲ್ಲಿನ ನಿಜಾಮಾಬಾದ್ ಜಿಲ್ಲೆಯಲ್ಲಿ ಹಣ ನೀಡುವ ನೆಪದಲ್ಲಿ 26 ವರ್ಷದ ಯುವತಿಯೊಬ್ಬಳ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಆರು ಮಂದಿ ಅತ್ಯಾಚಾರ ಎಸಗಿದ್ದಾರೆ.
ಯುವತಿಯು ತನ್ನ ಸಹೋದರಿಯ ಚಿಕಿತ್ಸೆಗಾಗಿ ನಿಜಾಮಾಬಾದ್ಗೆ ಬಂದಿದ್ದಳು. ಹಣ ಹೊಂದಿಸುವ ತೊಳಲಾಟದಲ್ಲಿದ್ದ ಯುವತಿಗೆ ಆ. 24 ರ ಮಧ್ಯರಾತ್ರಿ ಯಾರೋ ಕೆಲವರು ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಅವರು ಕರೆದ ಸ್ಥಳಕ್ಕೆ ತೆರಳಿದ್ದಳು. ಏಕಾಂತ ಪ್ರದೇಶಕ್ಕೆ ಕರೆದೊಯ್ದ ದುರುಳರು ಇಬ್ಬರು ಅಪ್ರಾಪ್ತರು ಸೇರಿದಂತೆ ಆರು ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.