ಕರ್ನಾಟಕ

karnataka

ETV Bharat / bharat

ಆರು ತಿಂಗಳ ಮಗುವಿನ ಮೇಲೆ ತಂದೆಯಿಂದಲೇ ಹಲ್ಲೆ - ಪೊಲೀಸರ ತನಿಖೆ

ಮಗುವಿನ ದೇಹದ ಅನೇಕ ಭಾಗಗಳಲ್ಲಿ ಸುಟ್ಟಗಾಯಗಳ ಗುರುತುಗಳಿವೆ. ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

baby
baby

By

Published : Jul 3, 2020, 4:47 PM IST

ಕೇರಳ:ಎರ್ನಾಕುಲಂ ಜಿಲ್ಲೆಯ ತಿರುವಂಕುಲಂನಲ್ಲಿ ವ್ಯಕ್ತಿಯೊಬ್ಬ ತನ್ನ ಆರು ತಿಂಗಳ ಹೆಣ್ಣು ಮಗುವಿನ ಮೇಲೆ ಹಲ್ಲೆ ನಡೆಸಿ ಮಗುವನ್ನು ಎಸೆದಿರುವ ಘಟನೆ ನಡೆದಿದೆ.

ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮಗುವಿನ ತಂದೆ ಆನಂದ್‌ನನ್ನು ಬಂಧಿಸಿದ್ದಾರೆ.

ಮಗುವಿನ ದೇಹದ ಅನೇಕ ಭಾಗಗಳಲ್ಲಿ ಸುಟ್ಟಗಾಯದ ಗುರುತುಗಳಿವೆ. ಕುಡಿದು ಬಂದು ಮಗುವನ್ನು ಹಿಂಸಿಸಿ ಕೆಳಗೆ ಎಸೆಯುತ್ತಿದ್ದ ಎಂದು ಮಗುವಿನ ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ.

ABOUT THE AUTHOR

...view details