ಮಹಾರಾಷ್ಟ್ರ: ದೀಪಾವಳಿ ಹಿನ್ನೆಲೆ ಒಟ್ಟಾಗಿ ಸೇರಿದ ಸ್ನೇಹಿತರು ಸಮುದ್ರದಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿದ್ದು ಇಬ್ಬರು ಸಾವಿಗೀಡಾಗಿದ್ದು, ಇನ್ನುಳಿದವರನ್ನು ರಕ್ಷಣೆ ಮಾಡಲಾಗಿದೆ.
ಈಜಲು ಬೀಚ್ಗೆ ಇಳಿದ ಆರು ಯುವಕರಲ್ಲಿ ನಾಲ್ವರ ರಕ್ಷಣೆ, ಇಬ್ಬರ ಸಾವು - maharastra news
ದಪೋಲಿ ತಾಲೂಕಿನ ಹಾರ್ನೆ ಪಾಲಂಡೆಯಲ್ಲಿ ಈ ಘಟನೆ ಜರುಗಿದೆ. ಮಹಾದ್‌ನಿಂದ 8 ಯುವಕರು ಇಲ್ಲಿಗೆ ಬಂದಿದ್ದರು. ಈ ಎಲ್ಲಾ ಎಂಟು ಯುವಕರು ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎನ್ನಲಾಗಿದೆ.
ದಪೋಲಿ ತಾಲೂಕಿನ ಹಾರ್ನೆ ಪಾಲಂಡೆಯಲ್ಲಿ ಈ ಘಟನೆ ಜರುಗಿದೆ. ಮಹಾದ್‌ನಿಂದ 8 ಯುವಕರು ಇಲ್ಲಿಗೆ ಬಂದಿದ್ದರು. ಈ ಎಲ್ಲಾ ಎಂಟು ಯುವಕರು ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎನ್ನಲಾಗಿದೆ.
ಈ ಎಂಟು ಸ್ನೇಹಿತರಲ್ಲಿ ಇಬ್ಬರು ತೀರದಲ್ಲಿದ್ದರೆ, ಉಳಿದ ಆರು ಮಂದಿ ಈಜಲು ಬೀಚ್ಗೆ ಇಳಿದಿದ್ದಾರೆ. ಅದೇ ವೇಳೆಗೆ ಈ ಆರು ಜನರು ದೊಡ್ಡ ಅಲೆಗೆ ಸಿಲುಕಿಕೊಂಡಿದ್ದಾರೆ. ತಕ್ಷಣವೇ ದಡದಲ್ಲಿದ್ದವರು ಅವರ ರಕ್ಷಣೆಗೆ ಧಾವಿಸಿದ್ದಾರೆ. ಮುಳುಗಿದ ಆರು ಜನರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಈ ನಾಲ್ವರಲ್ಲಿ ಓರ್ವ ಯುವಕ ಗಂಭೀರವಾಗಿದ ಹಿನ್ನೆಲೆ ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನುಳಿದಂತೆ ಕಾಣೆಯಾಗಿರುವ ಇನ್ನಿಬ್ಬರ ಶವಗಳು ದೊರಕಿವೆ.