ಕರ್ನಾಟಕ

karnataka

ETV Bharat / bharat

ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸಿಎಂ ಕಾರ್ಯದರ್ಶಿ ಹುದ್ದೆಯಿಂದ ಎಂ.ಶಿವಶಂಕರ್​​​ ಬಿಡುಗಡೆ

ಯುಎಇ ರಾಯಭಾರ ಕಚೇರಿ ಹೆಸರಿಗೆ ಬಂದ ಪಾರ್ಸಲ್​​ ಮೂಲಕ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‍ನೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ ಅವರ ಕಾರ್ಯದರ್ಶಿ ಎಂ.ಶಿವಶಂಕರ್​ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

ಸಿಎಂ ಕಾರ್ಯದರ್ಶಿ ಎಂ. ಶಿವಶಂಕರ್​​ ಹುದ್ದೆಯಿಂದ ವಜಾ
ಸಿಎಂ ಕಾರ್ಯದರ್ಶಿ ಎಂ. ಶಿವಶಂಕರ್​​ ಹುದ್ದೆಯಿಂದ ವಜಾ

By

Published : Jul 7, 2020, 8:05 PM IST

Updated : Jul 8, 2020, 9:58 AM IST

ತಿರುವನಂತಪುರಂ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪದ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ ಅವರ ಖಾಸಗಿ ಕಾರ್ಯದರ್ಶಿ ಎಂ.ಶಿವಶಂಕರ್​​ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.

ವರದಿಗಳ ಪ್ರಕಾರ, ಶಿವಶಂಕರ್ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಮಿರ್ ಮೊಹಮ್ಮದ್ ಅವರನ್ನು ಮುಖ್ಯಮಂತ್ರಿ ಕಚೇರಿಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಈ ಮಧ್ಯೆ ಶಿವಶಂಕರ್ ಅವರು ಕೇರಳ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದು, ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿದ ನಂತರ ದೀರ್ಘ ಕಾಲದ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್​ ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ.

ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜೂನ್ 5ರಂದು ಸರಕು ಸಾಗಣೆ ವಿಮಾನದಲ್ಲಿ ತರಲಾಗಿದ್ದ 30 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಈ ಪಾರ್ಸಲ್​​​ ದುಬೈನಿಂದ ಬಂದಿದ್ದು, ಯುಎಇ ರಾಯಭಾರ ಕಚೇರಿ ಹೆಸರಿಗೆ ಬಂದಿದೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ, ಕಳ್ಳಸಾಗಣೆಯ ಆರೋಪಿ ಸರಿತ್ ಯುಎಇ ಕಾನ್ಸುಲೇಟ್‌ನ ಮಾಜಿ ಸಿಬ್ಬಂದಿಯಾಗಿದ್ದು, ಅವರ ಈ ಅಕ್ರಮ ಅಕ್ರಮ ಕೆಲಸಗಳಿಗೆ ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಲಿಮಿಟೆಡ್ (ಕೆಎಸ್‌ಐಟಿಐಎಲ್)ನ ಸಿಬ್ಬಂದಿಯಾಗಿದ್ದ ಸ್ವಪ್ನಾ ಸುರೇಶ್ ಅವರ ಕುಮ್ಮಕ್ಕು ಇತ್ತು ಎನ್ನಲಾಗಿದೆ. ಸೋಮವಾರದವರೆಗೆ ಸರಿತ್ ಅವರನ್ನು ಪ್ರಶ್ನಿಸಿದಾಗ ಈ ಪ್ರಕರಣದಲ್ಲಿ ಆಕೆಯ ಪಾಲ್ಗೊಳ್ಳುವಿಕೆ ಇರುವುದು ಬಹಿರಂಗವಾಗಿದೆ. ಕಸ್ಟಮ್ಸ್ ಇಲಾಖೆಯ ಪ್ರಕಾರ ಸ್ವಪ್ನಾ ಸುರೇಶ್ ಪರಾರಿಯಾಗಿದ್ದಾರೆ. ತನಿಖಾ ತಂಡ ಆಕೆಯನ್ನು ಹುಡುಕುತ್ತಿದೆ ಎನ್ನಲಾಗಿದೆ.

Last Updated : Jul 8, 2020, 9:58 AM IST

ABOUT THE AUTHOR

...view details