ಪುಣೆ (ಮಹಾರಾಷ್ಟ್ರ): ಫೆಬ್ರವರಿ 19 ರಿಂದ ರಾಷ್ಟ್ರಗೀತೆಯೊಂದಿಗೆ ತಮ್ಮ ಕೆಲಸ ಪ್ರಾರಂಭಿಸಲು ರಾಜ್ಯ ಸರ್ಕಾರ ಕಾಲೇಜುಗಳಿಗೆ ನಿರ್ದೇಶನ ನೀಡಿದೆ ಎಂದು ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ಹೇಳಿದ್ದಾರೆ.
ಫೆಬ್ರವರಿ 19ರಿಂದ ಮಹಾರಾಷ್ಟ್ರದ ಕಾಲೇಜುಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ
ಮಹಾರಾಷ್ಟ್ರದ ಎಲ್ಲಾ ಕಾಲೇಜುಗಳಲ್ಲಿ ನವೆಂಬರ್ 19 ರಿಂದ ರಾಷ್ಟ್ರಗೀತೆ ಹಾಡುವುದು ಕಡ್ಡಾಯವಾಗಿದೆ ಎಂದು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ತಿಳಿಸಿದ್ದಾರೆ.
ಕಾಲೇಜು ಪ್ರಾರಂಭವಾಗುವ ಮೊದಲು ರಾಷ್ಟ್ರಗೀತೆ ಹಾಡಬೇಕು ಎಂಬ ನಿರ್ಧಾರವನ್ನು ಇತ್ತೀಚೆಗಷ್ಟೆ ತೆಗೆದುಕೊಂಡಿದ್ದೇವೆ. ಆದ್ದರಿಂದ ಇದನ್ನು ಫೆಬ್ರವರಿ 19 ರಿಂದ ಶಿವ ಜಯಂತಿ ಸಂದರ್ಭದಲ್ಲಿ ಪ್ರಾರಂಭಿಸಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಕಾಲೇಜುಗಳಿಗೆ ಫೆ.19ರ ಒಳಗೆ ಪತ್ರ ಬರೆಯಲಾಗುವುದು. ಅಲ್ಲದೆ ಈ ನಿರ್ಧಾರವನ್ನು ಕಾರ್ಯಗತಗೊಳಿಸಲು ಎಲ್ಲರೂ ಒಪ್ಪಿದ್ದಾರೆ ಎಂದು ಸಚಿವ ಸಮಂತ್ ತಿಳಿಸಿದರು.
ಈ ಮೂಲಕ ಒಂದು ದಿನದಲ್ಲಿ 15 ಲಕ್ಷ ಜನರು ರಾಷ್ಟ್ರಗೀತೆ ಹಾಡಲಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಒಂದು ದಿನಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ರಾಷ್ಟ್ರಗೀತೆ ಹಾಡುವ ದೇಶದ ಏಕೈಕ ರಾಜ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.