ಕರ್ನಾಟಕ

karnataka

ETV Bharat / bharat

ರಸ್ತೆಯಲ್ಲಿ ಪಾರ್ಕಿಂಗ್​ ಮಾಡಿದ್ದಕ್ಕೆ ವ್ಯಾಪಾರಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ ಕಾರ್ಪೊರೇಟರ್!​ - shivsena

ಕೋಳಿ ಸಾಗಾಟದ ಗಾಡಿಯನ್ನು ರಸ್ತೆಯಲ್ಲಿ ನಿಲ್ಲಿಸಿದ್ದಕ್ಕಾಗಿ ಕಾರ್ಪೊರೇಟರ್​ವೊಬ್ಬರು ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್​ ಆಗಿದೆ.

corporator

By

Published : Jul 6, 2019, 12:12 PM IST

ಮುಂಬೈ:ಕೋಳಿ ಸಾಗಣೆ ಮಾಡುವ ಗಾಡಿಯನ್ನು ರಸ್ತೆಯಲ್ಲಿ ನಿಲ್ಲಿಸಿದ್ದಕ್ಕಾಗಿ ಗರಂ ಆದ ಶಿವಸೇನಾ ಕಾರ್ಪೊರೇಟರ್​ವೊಬ್ಬರು ವ್ಯಾಪಾರಿ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ.

ಮಹಿಮ್ ಏರಿಯಾದ ಮಾಚಿಮಾರ್ ಕಾಲೋನಿಯ ರೈಲ್ವೆ ಸ್ಟೇಷನ್ ಬಳಿ ಕೋಳಿಗಳನ್ನು ತುಂಬಿದ್ದ ಕ್ಯಾಂಟರ್​ ನಿಲ್ಲಿಸಲಾಗಿತ್ತು. ಇದನ್ನು ಗಮನಿಸಿದ ಕಾರ್ಪೊರೇಟರ್​ ಮಿಲಿಂದ್​ ವೈದ್ಯ ಕುದ್ದು ಹೋಗಿದ್ದರು.

ತಕ್ಷಣವೇ ಸ್ಥಳಕ್ಕೆ ತೆರಳಿ ವ್ಯಾಪಾರಿಯ ಜುಟ್ಟು ಹಿಡಿದು, ಕಪಾಳಕ್ಕೆ ಬಾರಿಸಿದ್ದಾರೆ. ಇದನ್ನು ನೋಡುತ್ತಿದ್ದ ಸ್ಥಳೀಯರು ತಡೆಯಲು ಮುಂದಾದರೂ ಕ್ಯಾರೆ ಎನ್ನದ ಅವರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿವೆ. ಕಾರ್ಪೋರೇಟರ್​​ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details