ನವದೆಹಲಿ: ಮಿಲಿಟರಿ ಜಾಕೆಟ್ ಧರಿಸಿ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸದ್ಯ ವಿವಾದಕ್ಕೆ ಗುರಿಯಾಗಿದ್ದಾರೆ.
ವಿವಾದಕ್ಕೆ ಕಾರಣವಾದ ದೆಹಲಿ ಬಿಜೆಪಿ ಅಧ್ಯಕ್ಷನ ಮಿಲಿಟರಿ ಡ್ರೆಸ್... ಟ್ವೀಟ್ ಮೂಲಕವೇ ತಿರುಗೇಟು - ದೆಹಲಿ ಬಿಜೆಪಿ ಅಧ್ಯಕ್ಷ
ದೆಹಲಿಯ ಉತ್ತರ ಈಶಾನ್ಯ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿರುವ ಮನೋಜ್ ತಿವಾರಿ ಶನಿವಾರದಂದು ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ರ‍್ಯಾಲಿಗೆ ಚಾಲನೆ ನೀಡುವ ವೇಳೆ ಮಿಲಿಟರಿ ಜಾಕೆಟ್ ಧರಿಸಿದ್ದರು.
ತಿವಾರಿ ಸದ್ಯದ ದೇಶದ ಬೆಳವಣಿಗೆಯನ್ನು ರಾಜಕೀಯಗೊಳಿಸುತ್ತಿದ್ದಾರೆ. ಜೊತೆಗೆ ಅವರಂತೆ ಡ್ರೆಸ್ ಧರಿಸಿ ಯೋಧರಿಗೆ ಅವಮಾನ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಮೋದಿ ಯೋಧರ ಹೆಸರಲ್ಲಿ ವೋಟ್ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಡ್ರೆಸ್ ವಿಚಾರವಾಗಿ ಟ್ವೀಟ್ ಮಾಡಿರುವ ಮನೀಜ್ ತಿವಾರಿ, ನಾನು ಮಿಲಿಟರಿ ಡ್ರೆಸ್ ಧರಿಸಿದ್ದು ಯೋಧರ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ. ಇಂತಹ ವಿಚಾರವನ್ನು ಅವಮಾನ ಎನ್ನುವ ಅಗತ್ಯವಿಲ್ಲ. ನಾಳೆ ಒಂದು ವೇಳೆ ನಾನು ನೆಹರು ಜಾಕೆಟ್ ಧರಿಸಿದರೆ ನೆಹರುರವರಿಗೆ ಅವಮಾನವಾಗುತ್ತದಾ ಎಂದು ತಿರುಗೇಟು ನೀಡಿದ್ದಾರೆ.