ಕರ್ನಾಟಕ

karnataka

ETV Bharat / bharat

ಶಿಕ್ಷಕರ ದಿನಾಚರಣೆ: ಶುಭ ಹಾರೈಸಿದ ಅಮಿತ್ ಶಾ, ರಮೇಶ್ ಪೋಖ್ರಿಯಾಲ್ - ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವಿಟ್

ಶಿಕ್ಷಕರ ದಿನಾಚರಣೆ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಚಿವ ರಮೇಶ್ ಪೋಖ್ರಿಯಾಲ್ ಶಿಕ್ಷಕರಿಗೆ ಶುಭ ಹಾರೈಸಿದ್ದಾರೆ.

teachers day
teachers day

By

Published : Sep 5, 2020, 9:29 AM IST

ನವದೆಹಲಿ: ಶಿಕ್ಷಕರ ದಿನಾಚರಣೆ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಶಿಕ್ಷಕರಿಗೆ ಶುಭ ಹಾರೈಸಿದ್ದಾರೆ.

"ಅಪ್ರತಿಮ ಚಿಂತಕ ಮತ್ತು ಪ್ರಬುದ್ಧ ವಿದ್ವಾಂಸ, ಮಾಜಿ ಉಪ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ನಿಸ್ವಾರ್ಥವಾಗಿ ಮಾರ್ಗದರ್ಶನ ಮಾಡುವ ಮೂಲಕ ರಾಷ್ಟ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಇಡೀ ಬೋಧಕ ವೃಂದಕ್ಕೆ ಶುಭಾಶಯಗಳು" ಎಂದು ಅಮಿತ್​ ಶಾ ಟ್ವೀಟ್ ಮಾಡಿದ್ದಾರೆ.

"ಶಿಕ್ಷಕರ ದಿನದಂದು ಎಲ್ಲಾ ದೇಶವಾಸಿಗಳಿಗೆ ನಾನು ಶುಭ ಹಾರೈಸುತ್ತೇನೆ ಮತ್ತು ಎಲ್ಲಾ ಗುರುಗಳಿಗೆ ನಮಸ್ಕರಿಸುತ್ತೇನೆ. ಶಿಕ್ಷಕರ ದಿನದಂದು ನಮ್ಮ ಶಿಕ್ಷಕರು, ಸಲಹೆಗಾರರು ಮತ್ತು ಪೋಷಕರಿಗೆ ಧನ್ಯವಾದಗಳನ್ನು ಅರ್ಪಿಸೋಣ. ಅವರ ಆಶೀರ್ವಾದದಿಂದ ನಾವು ಬಹಳಷ್ಟು ಕಲಿತಿದ್ದೇವೆ" ಎಂದು ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವೀಟ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದು, "ಕಲಿಯಲು ಉತ್ಸುಕರಾಗಿರುವವರಿಗೆ ಇಡೀ ಜಗತ್ತೇ ಶಿಕ್ಷಕ. ಶಿಕ್ಷಕರ ದಿನಾಚರಣೆಯ ಶುಭಾಶಯಗಳು" ಎಂದಿದ್ದಾರೆ.

ABOUT THE AUTHOR

...view details