ಕರ್ನಾಟಕ

karnataka

ETV Bharat / bharat

ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಹೇಳಿಕೆ... ದೊಡ್ಡ ಗೌಡ್ರು, ಉಮರ್​ ಅಬ್ದುಲ್ಲಾಗೆ ಬೆಂಬಲಿಸುತ್ತಾರಾ ಅಂತ ಕೇಳಿದ ಮೋದಿ

ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಹೇಳಿಕೆ ವಿಚಾರ ನ್ಯಾಷನಲ್​ ಕಾಂಗ್ರೆಸ್​ ನಾಯಕ ಉಮರ್​ ಅಬ್ದುಲ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉಮರ್​ ಅಬ್ದುಲ್ಲಾ

By

Published : Apr 2, 2019, 8:50 AM IST

ನವದೆಹಲಿ: ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಅವಶ್ಯಕತೆ ಇದೆ ಎಂದು ಹೇಳಿದ್ದ ನ್ಯಾಷನಲ್​ ಕಾಂಗ್ರೆಸ್​ ನಾಯಕ ಉಮರ್​ ಅಬ್ದುಲ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದು ಇದಕ್ಕೆ ಕಾಂಗ್ರೆಸ್​ ಜೊತೆಗಿರುವ ಮಹಾ ಮೈತ್ರಿ ಕೂಟ ಬೆಂಬಲ ನೀಡಲಿದೆಯೇ ಎಂದು ಪ್ರಶ್ನಿಸಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ರಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷವು ಈ ಪ್ರಶ್ನೆಗೆ ಉತ್ತರ ಕೊಡಬೇಕು. ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ, ಮಾಜಿ ರಕ್ಷಣಾ ಸಚಿವ ಶರದ್​ ಪವಾರ್​, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಮಹಾ ಘಟ ಬಂಧನದಲ್ಲಿರುವ ಎಲ್ಲ ನಾಯಕರಿಗೂ ನಾನು ಈ ಪ್ರಶ್ನೆ ಮುಂದಿಡುತ್ತಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್​ ತನ್ನ ಮೈತ್ರಿ ಕೂಟದಲ್ಲಿರುವ ಯಾವುದೇ ನಾಯಕರು ಈ ರೀತಿಯ ಹೇಳಿಕೆ ನೀಡಿದಾಗ ಮೌನಕ್ಕೆ ಶರಣಾಗುತ್ತದೆ. ಇಂಥ ನಡೆಗಳಿಗೆ ಸಮ್ಮತಿಸುವುದರಿಂದಲೇ ಕಾಶ್ಮೀರದಲ್ಲಿ ಪಾಕ್​ ಪರ ಘೋಷಣೆ ಕೂಗುತ್ತಿರುವುದು ಎಂದು ಪಿಎಂ ಕುಟುಕಿದರು.

ನನ್ನ ಅಭಿಮತಕ್ಕೆ ವೇದಿಕೆ ನೀಡಿದ್ದಕ್ಕೆ ಥ್ಯಾಂಕ್ಸ್​:

ಉಮರ್​ ಪ್ರಧಾನಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಶ್ಮೀರದ ನ್ಯಾಷನಲ್​ ಕಾಂಗ್ರೆಸ್​ ನಾಯಕ ಉಮರ್​ ಅಬ್ದುಲ್ಲಾ ನನ್ನ ಅಭಿಮತಕ್ಕೆ ವೇದಿಕೆ ನೀಡಿದ್ದಕ್ಕೆ ಪ್ರಧಾನಿ ಅವರಿಗೆ ನನ್ನ ಧನ್ಯವಾದಗಳು. ಹಾಗೂ ನನ್ನ ಭಾಷಣವನ್ನು ಪತ್ರಕರ್ತರಿಗೆ ವಾಟ್ಸ್​ಆ್ಯಪ್​ ಮಾಡಿದ ಬಿಜೆಪಿ ಐಟಿ ಸೆಲ್​ಗೂ ಕೂಡ ನನ್ನ ಧನ್ಯವಾದಗಳು. ನನ್ನ ಭಾಷಣವನ್ನು ನೀವಿ ನನಗಿಂತ ಚೆನ್ನಾಗಿ ಎಲ್ಲರಿಗೂ ತಲುಪಿಸಿದ್ದೀರ ಎಂದು ಉಮರ್​ ಟ್ವೀಟ್​ ಮಾಡಿದ್ದಾರೆ.

For All Latest Updates

ABOUT THE AUTHOR

...view details