ಮುಂಬೈ: ದೇಶಾದ್ಯಂತ ನಿನ್ನೆಯಿಂದ ಲಾಕ್ಡೌನ್ 3.0 ಜಾರಿಗೊಂಡಿದ್ದು, ಕೆಲವೊಂದು ಸ್ಥಳಗಳಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಆದೇಶ ನೀಡಿವೆ. ಆದರೆ, ಮಹಾರಾಷ್ಟ್ರದ ಮುಂಬೈನಲ್ಲಿ ಮಾತ್ರ ಈ ಕಾರ್ಯಸೂಚಿ ಅನ್ವಯವಾಗುವುದಿಲ್ಲ.
ಲಾಕ್ಡೌನ್ ಮುಕ್ತಾಯಗೊಳ್ಳುವವರೆಗೆ ಮುಂಬೈನಲ್ಲಿ ನಿಷೇಧಾಜ್ಞೆ ಜಾರಿ - ಕೋವಿಡ್-19
ಮಹಾರಾಷ್ಟ್ರದ ಮುಂಬೈನಲ್ಲಿ ಅತಿ ಹೆಚ್ಚು ಕೋವಿಡ್ - 19 ಪ್ರಕರಣ ಕಾಣಿಸಿಕೊಂಡಿರುವ ಕಾರಣ ಮೇ.17ರವರೆ ಸೆಕ್ಷನ್ 144 ಜಾರಿಗೊಳಿಸಲು ಮುಂಬೈ ಸರ್ಕಾರ ನಿರ್ಧಾರ ಮಾಡಿದೆ.
COVID-19 outbreak
ಅತಿ ಹೆಚ್ಚು ಕೊರೊನಾ ವೈರಸ್ ಕಾಣಿಸಿಕೊಂಡಿರುವ ಮಹಾರಾಷ್ಟ್ರದ ಮುಂಬೈನಲ್ಲಿ ಹೀಗಾಗಿ ಮೇ.17ರವರೆಗೆ ಲಾಕ್ಡೌನ್ ಮುಂದುವರಿಕೆ ಮಾಡಿ, ಸೆಕ್ಷನ್ 144 ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ ಮಾಡಿದೆ.
ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 14,541 ಪ್ರಕರಣ ಕಾಣಿಸಿಕೊಂಡಿದ್ದು, ಈಗಾಗಲೇ 583 ಜನರು ಸಾವನ್ನಪ್ಪಿದ್ದಾರೆ. ಇದರ ಮುಂಬೈನ ಧಾರಾವಿ ಸ್ಲಂ ಪ್ರದೇಶದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated : May 5, 2020, 11:45 AM IST