ಬಡವಾಣಿ(ಮಧ್ಯಪ್ರದೇಶ):ಕಂಠಪೂರ್ತಿ ಕುಡಿದ ನಿಶೆಯಲ್ಲಿ ಸರ್ಕಾರಿ ಶಾಲೆಯ ಹೆಡ್ಮಾಸ್ಟರ್ ಒಬ್ರು ಶಾಲೆಯಲ್ಲೇ ವಿದ್ಯಾರ್ಥಿನಿಯರ ಶಾಲಾ ಯೂನಿಫಾರ್ಮ್ ಧರಿಸಿರುವ ಘಟನೆ ಮಧ್ಯಪ್ರದೇಶದ ಬಡವಾಣಿಯಲ್ಲಿ ನಡೆದಿದೆ.
ಮದ್ಯ ಸೇವಿಸಿ ಶಾಲೆಗೆ ಆಗಮಿಸಿರುವ ಹೆಡ್ ಮಾಸ್ಟರ್, ರೂಂನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಎದುರಲ್ಲೇ ತಾನು ಹಾಕಿಕೊಂಡಿದ್ದ ಬಟ್ಟೆ ಕಳಚಿ, ಯೂನಿಫಾರ್ಮ್ ಹಾಕಿಕೊಂಡಿದ್ದಾರೆ. ಜತೆಗೆ ಗಂಡು ಮಕ್ಕಳಿಗೆ ವಿದ್ಯಾರ್ಥಿನಿಯರ ಡ್ರೆಸ್ ಹಾಕಿಕೊಳ್ಳುವಂತೆ ಸೂಸಿಸಿ ವಿಕೃತಿ ಮೆರೆದಿದ್ದಾರೆ. ಇದರ ಸಂಪೂರ್ಣ ದೃಶ್ಯಾವಳಿ ಮೊಬೈಲ್ನಲ್ಲಿ ಸೆರೆಯಾಗಿದೆ.