ನವದೆಹಲಿ: ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ರಸ್ತೆ ಬದಿಯ ಮಾರಾಟಗಾರರಿಗೆ ಆತ್ಮ ನಿರ್ಭರ ವಿಶೇಷ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ 5,000 ಕೋಟಿ ರೂ.ಗಳ ಸಾಲ ಸೌಲಭ್ಯ ಪಡೆಯಲು ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳು 10 ಸಾವಿರ ರೂ.ಗಳ ಸಾಲ ಸೌಲಭ್ಯ ಪಡೆಯಬಹುದಾಗಿದೆ.
ರಾಜ್ಯ ಸರ್ಕಾರಗಳು ಸಂಗ್ರಹಿಸಿದ ಡೇಟಾ ಪ್ರಕಾರ ಸುಮಾರು 50 ಲಕ್ಷ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಈ ಯೋಜನೆಗೆಂದೇ ಸರ್ಕಾರದಿಂದ ಸುಮಾರು 5 ಸಾವಿರ ಕೋಟಿ ರೂ. ಹಣ ಹರಿದುಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಜೊತೆಗೆ ಡಿಜಿಟಲ್ ಪಾವತಿ ಮತ್ತು ಸಮಯೋಚಿತ ಮರುಪಾವತಿಯನ್ನು ಉತ್ತೇಜಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ದೇಶದ ಟಾಪ್ ಟೆನ್ ರಾಜ್ಯಗಳಲ್ಲಿ 35 ಲಕ್ಷ ಬೀದಿ ಬದಿ ಮಾರಾಟಗಾರರಿದ್ದಾರೆ. ಇವರಲ್ಲಿ ಉತ್ತರ ಪ್ರದೇಶದಲ್ಲಿ ಸುಮಾರು 7.8 ಲಕ್ಷ ಮಾರಾಟಗಾರರಿದ್ದು, ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ 5.5 ಲಕ್ಷ ಮಾರಾಟಗಾರರನ್ನು ಹೊಂದಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿದ್ಧಪಡಿಸಿದ ವರದಿಯಲ್ಲಿ ತಿಳಿಸಲಾಗಿದೆ.
SBI ವರದಿಯಂತೆ ದೇಶದ ಒಟ್ಟು ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಇಂತಿದೆ...
ಸಂಖ್ಯೆ | ರಾಜ್ಯ | ಬೀದಿಬದಿ ವ್ಯಾಪಾರಿಗಳು(ಲಕ್ಷಗಳಲ್ಲಿ) |
ಉತ್ತರ ಪ್ರದೇಶ | 7.8 | |
2. | ಪಶ್ಚಿಮ ಬಂಗಾಳ | 5.5 |
3. | ಬಿಹಾರ | 5.3 |
4. | ರಾಜಸ್ತಾನ | 3.1 |
5. | ಮಹಾರಾಷ್ಟ್ರ | 2.9 |
6. | ತಮಿಳುನಾಡು | 2.8 |
7. | ಆಂಧ್ರಪ್ರದೇಶ | 2.1 |
8. | ಕರ್ನಾಟಕ | 2.1 |
9. | ಗುಜರಾತ್ | 2 |
10. | ಕೇರಳ | 1.9 |
11. | ಅಸ್ಸಾಂ | 1.9 |
12. | ಒಡಿಶಾ | 1.7 |
13. | ಹರಿಯಾಣ | 1.5 |
14. | ಮಧ್ಯಪ್ರದೇಶ | 1.4 |
15. | ಪಂಜಾಬ್ | 1.4 |