ನವದೆಹಲಿ: ರಾಷ್ಟ್ರಪತಿ, ಪ್ರಧಾನಿ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಹಾಲಿ ನ್ಯಾಯಮೂರ್ತಿಗಳು, ಹೈಕೋರ್ಟ್ಗಳ ಬಗ್ಗೆ ಚೀನಾ ನಡೆಸುತ್ತಿರುವ ಕೆಲ ಕುತಂತ್ರ ತನಿಖೆ ಕುರಿತು ಕಣ್ಣಿಡಲು ಕೇಂದ್ರ ಸರ್ಕಾರ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ಗುರುವಾರ ತನ್ನ ಆದೇಶದಲ್ಲಿ, "ಮುಂದಿನ ಕ್ರಿಸ್ಮಸ್ ಮತ್ತು ಹೊಸ ವರ್ಷದ ರಜಾ ದಿನಗಳ ಬಳಿಕ ಯಾವೆಲ್ಲಾ ಆ್ಯಪ್ಗಳನ್ನು ತೆಗೆಯಬೇಕು ಎಂಬ ವಿಷಯವನ್ನು ಪಟ್ಟಿ ಮಾಡಿ" ಎಂದು ಹೇಳಿದೆ.
ಚೀನಾವು ಒಂದು ಮೋಡ್ ಮೂಲಕ ಮಾತ್ರವಲ್ಲದೆ ಹಣ-ಸಾಲ ನೀಡುವ ಅಪ್ಲಿಕೇಶನ್‌ಗಳಂತಹ ಇತರ ವಿಧಾನಗಳಿಂದಲೂ ಭಾರತೀಯ ನಾಗರಿಕರ ಡೇಟಾವನ್ನು ಹೊರತೆಗೆದಿದೆ. ಇದು ಭವಿಷ್ಯದಲ್ಲಿ ಹಾನಿಕಾರಕ ಪರಿಣಾಮವನ್ನು ಬೀರಬಹುದು, ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗೆ ಅಪಾಯ" ಎಂದು ಸೇವ್ ದೆಮ್ ಇಂಡಿಯಾ ಫೌಂಡೇಶನ್ ಎನ್‌ಜಿಒ ತಿಳಿಸಿದೆ.