ನವದೆಹಲಿ: ಬೆಂಗಳೂರು ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ವೇಳೆ ಕೆಲ ಯುವಕರು ಮಾನವ ಸರಪಳಿ ನಿರ್ಮಿಸಿ ದೇವಸ್ಥಾನದ ರಕ್ಷಣೆ ನಿಂತ ವಿಡಿಯೋವೊಂದು ವೈರಲ್ ಆಗಿದೆ. ಈ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಮುಹಮ್ಮದ್ ನುಅಮ್ಮಿರ್ ಎಂಬಾತ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ವಾಲ್ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರು ಗಲಭೆಯ ವೇಳೆ ಮುಸ್ಲಿಮರು ಮಾನವ ಸರಪಳಿ ನಿರ್ಮಿಸಿ ದೇವಸ್ಥಾನದ ರಕ್ಷಣೆಗೆ ನಿಂತಿದ್ದರು. ಇದು ಭಾರತದ ಸೌಹಾರ್ದತೆ ಎಂದು ಬರೆದುಕೊಂಡಿದ್ದ.