ಹೈದರಾಬಾದ್:ಇಂದಿನ ಕೋಯಿಕ್ಕೋಡ್ ವಿಮಾನ ದುರಂತ 2010ರಲ್ಲಿ ಮಂಗಳೂರಿನಲ್ಲಿ ನಡೆದ ದುರಂತವನ್ನು ನೆನಪಿಸುತ್ತಿದೆ. ಯಾಕಂದ್ರೆ ಮಂಗಳೂರಿನಲ್ಲೂ ಪತನಗೊಂಡಿದ್ದು ಏರ್ಇಂಡಿಯಾ ಎಕ್ಸ್ಪ್ರೆಸ್ ಬೋಯಿಂಗ್ 737 ವಿಮಾನ. ಇವತ್ತು ಪತನ ಆಗಿದ್ದೂ ಏರ್ ಇಂಡಿಯಾ ಎಕ್ಸ್ಪ್ರೆಸ್ ಬೋಯಿಂಗ್ 737 ವಿಮಾನ. ಎರಡೂ ವಿಮಾನಗಳು ಬಂದಿದ್ದು ದುಬೈಯಿಂದಲೇ. ಮಂಗಳೂರಿನ ಬಜ್ಪೆಯದ್ದೂ ಟೇಬಲ್ ಟಾಪ್ ರನ್ವೇ. ಕೇರಳದ ಕೋಯಿಕ್ಕೋಡ್ನ ಇಂಟರ್ನ್ಯಾಶನಲ್ ಏರ್ಪೋರ್ಟ್ ಕೂಡ ಟೇಬಲ್ ಟಾಪ್ ರನ್ವೇಯನ್ನೇ ಹೊಂದಿದೆ.
ಎರಡೂ ಏರ್ಪೋರ್ಟ್ಗಳ ಇಕ್ಕೆಲಗಳಲ್ಲಿ ಇರುವುದು ಆಳವಾದ ಕಣಿವೆ. ಹೀಗಾಗಿ ಇಂತಹ ಏರ್ಪೋರ್ಟ್ಗಳಲ್ಲಿ ವಿಮಾನ ಲ್ಯಾಂಡ್ ಮಾಡುವಾಗ ಪೈಲೆಟ್ಗಳು ಬಹಳ ಚಾಕಚಕ್ಯತೆಯಿಂದ ವಿಮಾನವನ್ನು ಲ್ಯಾಂಡ್ ಮಾಡಬೇಕಾಗುತ್ತದೆ. ಇಂತಹ ಏರ್ಪೋರ್ಟ್ಗಳಲ್ಲಿ ಸ್ವಲ್ಪ ಎಡವಿದರೂ ಅಪಾಯ ಖಚಿತ. 2010ರ ಮೇ 22ರಂದು ಮಂಗಳೂರು ಏರ್ಪೋರ್ಟ್ನಲ್ಲಿ 158 ಜನರನ್ನು ಬಲಿ ಪಡೆದಿದ್ದ ಭೀಕರ ದುರಂತದ ಸಮಯದಲ್ಲೇ ಕೋಯಿಕ್ಕೋಡ್ ಏರ್ಪೋರ್ಟ್ ರನ್ವೇಯ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿದ್ದವು.
ವಿಮಾನ ದುರಂತದಲ್ಲಿ ಪೈಲೆಟ್ ಸೇರಿ 16 ಮಂದಿ ದುರ್ಮರಣ; 123 ಮಂದಿಗೆ ಗಾಯ, 15 ಜನರ ಸ್ಥಿತಿ ಗಂಭೀರ