ಕರ್ನಾಟಕ

karnataka

ETV Bharat / bharat

ರಾಹುಲ್​, ಪ್ರಿಯಾಂಕಾ ಭೇಟಿ ಬಳಿಕ ಮಹತ್ವದ ಬೆಳವಣಿಗೆ: ಸಚಿನ್​ ಪೈಲಟ್​ ಬಂಡಾಯ ಶಮನ!

ರಾಜಸ್ಥಾನ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲು ಕೇವಲ ನಾಲ್ಕು ದಿನ ಬಾಕಿ ಇರುವಾಗಲೇ ಅಲ್ಲಿನ ರಾಜಕೀಯದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಶಮನಗೊಂಡಿದ್ದು, ಹೀಗಾಗಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ನಿರಾಳರಾಗಿದ್ದಾರೆ.

Sachin Pilot
Sachin Pilot

By

Published : Aug 11, 2020, 2:46 AM IST

Updated : Aug 11, 2020, 6:13 AM IST

ನವದೆಹಲಿ:ರಾಜಸ್ಥಾನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್​​​ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಸಚಿನ್​ ಪೈಲಟ್​​ ಇದೀಗ ಸೈಲೆಂಟ್​ ಆಗಿದ್ದಾರೆ. ನಿನ್ನೆ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ಬಳಿಕ ಅವರು ಪಕ್ಷದೊಂದಿಗೆ ಕೈ ಜೋಡಿಸಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿನ್​ ಪೈಲಟ್​, ನಮ್ಮ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಕೇವಲ ಸೈದ್ಧಾಂತಿಕ ವಿಷಯದಿಂದ ಕೂಡಿದೆ. ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್​ ಪಕ್ಷದೊಂದಿಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಸಚಿನ್​ ಪೈಲಟ್​ ಬಂಡಾಯ ಶಮನ

ಅಶೋಕ್​ ಗೆಹ್ಲೋಟ್​ ಸರ್ಕಾರ ಉರುಳಿಸಲು ಪ್ಲಾನ್​ ಹಾಕಿಕೊಂಡಿದ್ದ ಸಚಿನ್​ ಪೈಲಟ್​ ಸೋಮವಾರ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜತೆ ಸುದೀರ್ಘ ಮಾತುಕತೆ ನಡೆಸಿದ ಅವರು ಪಕ್ಷದೊಂದಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ.

ಊಭಯ ನಾಯಕರೊಂದಿಗಿನ ಹಲವು ಗಂಟೆಗಳ ಮಾತುಕತೆ ಬಳಿಕ ಸಚಿನ್​ ಪೈಲಟ್​ ತಮ್ಮ ಬಂಡಾಯ ಕೊನೆಗೊಳಿಸಲು ಒಪ್ಪಿಕೊಂಡಿದ್ದು,​ ಪಕ್ಷ ಹಾಗೂ ಸಿಎಂ ಅಶೋಕ್​ ಗೆಹ್ಲೋಟ್​​ ಸರ್ಕಾರದ ಪರ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ಸಚಿನ್​ ಪೈಲಟ್​ ಹಾಗೂ ಅವರ ಜೊತೆಗಿರುವ ಶಾಸಕರ ಸಮಸ್ಯೆ ಬಗೆಹರಿಸಲು ಮೂವರು ಸದಸ್ಯರ ಸಮಿತಿ ರಚನೆ ಮಾಡಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎಂದು ಕೆ.ಸಿ ವೇಣುಗೋಪಾಲ್​ ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಇದೇ ವಾರ ನಡೆಯಲಿರುವ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲೂ ಅವರು ಭಾಗಿಯಾಗಲಿದ್ದು, ಶುಕ್ರವಾರದಿಂದ ವಿಧಾನಸಭಾ ಅಧಿವೇಶನ ನಡೆಯಲಿದೆ. ಈ ವೇಳೆ ಸಿಎಂ ತಮಗಿರುವ ಬೆಂಬಲ ಸಾಬೀತುಪಡಿಸಲು, ವಿಶ್ವಾಸಮತ ಯಾಚನೆ ಮಾಡಿದರೆ ಸಿಎಂ ಗೆಹ್ಲೋಟ್​ ಪರ ಹಕ್ಕು ಚಲಾವಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ನಮ್ಮ ಕುಂದುಕೊರತೆ ಗಮನಿಸಿ ಪರಿಹಾರ ನೀಡಿರುವ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್​ ಮುಖಂಡರಿಗೆ ಧನ್ಯವಾದ ಹೇಳಿರುವ ಸಚಿನ್​ ಪೈಲಟ್​, ಉತ್ತಮ ಭಾರತಕ್ಕಾಗಿ ಕೆಲಸ ಮಾಡುತ್ತೇನೆ. ರಾಜಸ್ಥಾನದ ಜನರಿಗೆ ನೀಡಿರುವ ಭರವಸೆ ತಲುಪಿಸಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯ ರಕ್ಷಣೆ ಮಾಡಲು ತಾವು ಬದ್ಧವಾಗಿರುವುದಾಗಿ ಇದೇ ವೇಳೆ ಘೋಷಣೆ ಮಾಡಿದ್ದಾರೆ.

Last Updated : Aug 11, 2020, 6:13 AM IST

ABOUT THE AUTHOR

...view details