ಕರ್ನಾಟಕ

karnataka

ETV Bharat / bharat

ಶಬರಿಮಲೆಗೆ ಸಾಂಪ್ರದಾಯಿಕ ಮಾರ್ಗದ ಮೂಲಕ ಯಾತ್ರಾರ್ಥಿಗಳಿಗೆ ಪ್ರವೇಶ ನಿಷೇಧ

ಅಕ್ಟೋಬರ್​​ 16ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭಕ್ತಾಧಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಈ ಬಾರಿ ಅರಣ್ಯ ಮಾರ್ಗ ಮೂಲಕ ಬರುವ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ ಎಂದು ದೇವಸ್ವಂ ಮಂಡಳಿ ತಿಳಿಸಿದೆ.

Sabarimala
ಶಬರಿಮಲೆ

By

Published : Oct 10, 2020, 2:14 PM IST

ತಿರುವನಂತಪುರಂ(ಕೇರಳ): ಲಾಕ್​ಡೌನ್​ ಬಳಿಕ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಕ್ಟೋಬರ್ 16 ರಿಂದ 5 ದಿನಗಳ ಕಾಲ ಮತ್ತೆ ತೆರೆಯಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಬಾರಿ ಸಾಂಪ್ರದಾಯಿಕ ಅರಣ್ಯ ಚಾರಣ ಮಾರ್ಗವನ್ನು ಮುಚ್ಚಲಾಗಿದ್ದು, ರಸ್ತೆಯ ಮೂಲಕ ಬರುವ ಭಕ್ತಾಧಿಗಳಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ಶಬರಿಮಲೆ

ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಈ ಬಗ್ಗೆ ಸಭೆ ಜರುಗಿದ್ದು, ಕೋವಿಡ್​​ ನಿಯಾಮವಳಿಗಳ ಪ್ರಕಾರ ಮುಖಗವಸು ಧರಿಸಿ ಅರಣ್ಯ ಮಾರ್ಗದ ಮೂಲಕ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವುದು ಕಷ್ಟದಾಯಕವಾಗಿದೆ ಎಂದು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನೀಲಕ್ಕಲ್‌ನಲ್ಲಿ ಆ್ಯಂಟಿಜೆನ್ ಪರೀಕ್ಷೆ ನಡೆಸಿದ ನಂತರ, ಕೊರೊನಾ ನೆಗೆಟಿವ್​ ಎಂಬ ವರದಿ ಬಂದ ಬಳಿಕ ಯಾತ್ರಿಕರು ಮರಕೂತ್ತಂನ ಸ್ವಾಮಿ ಅಯ್ಯಪ್ಪನ್ ರಸ್ತೆಯ ಮೂಲಕ ಅಯ್ಯಪ್ಪ ಸ್ವಾಮಿ ಸನ್ನಿಧಿಯನ್ನು ತಲುಪಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನೀಲಕ್ಕಲ್​​ನಲ್ಲಿ ಯಾತ್ರಿಕರ ಪರೀಕ್ಷೆ ನಡೆಸಲು ಆರೋಗ್ಯ ಕಾರ್ಯಕರ್ತರ ಸಮಿತಿಯನ್ನು ನಿಯೋಜಿಸಲಾಗುವುದು. ಈ ಕರ್ತವ್ಯಕ್ಕಾಗಿ ಸ್ವಯಂಸೇವಕರಾಗಿರುವ ಆರೋಗ್ಯ ಕಾರ್ಯಕರ್ತರನ್ನು ಆರೋಗ್ಯ ಇಲಾಖೆ ಮತ್ತು ದೇವಸ್ವಂ ಮಂಡಳಿಯು ಜಂಟಿಯಾಗಿ ಗುರುತಿಸಲಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಸದಸ್ಯ ಎನ್.ವಿಜಯಕುಮಾರ್ ತಿಳಿಸಿದ್ದಾರೆ.

ಕೊರೊನಾ ಬಗ್ಗೆ ವಿಧಿಸಲಾದ ನಿಯಮಗಳನ್ನು ಹಾಗೂ ಪ್ರೋಟೋಕಾಲ್​ಗಳನ್ನು ಸಿಬ್ಬಂದಿ, ಅಧಿಕಾರಿಗಳು ಮತ್ತು ಭಕ್ತರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಇದೇ ವೇಳೆ ತಿಳಿಸಿದ್ದಾರೆ.

ABOUT THE AUTHOR

...view details