ಪಾಟ್ನಾ (ಬಿಹಾರ): ವಿಧಾನಸಭಾ ಚುನಾವಣೆ ನಡೆದ ಬಳಿಕ ಬಿಹಾರ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಇಬ್ಬರು ಶಾಸಕರ ಬೆಂಬಲಿಗರು ಪಕ್ಷದ ಶಾಸಕಾಂಗ ಸಭೆಯಲ್ಲಿ ಕೈ ಕೈ ಮಿಲಾಯಿಸಿದ್ದಾರೆ ಎಂದು ವರದಿಯಾಗಿದೆ.
ಈ ಬಾರಿಯ ಚುನಾವಣೆಯಲ್ಲಿ 19 ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, 17 ಶಾಸಕರು ತಮ್ಮ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಪಾಟ್ನಾದ ಸದಾಖತ್ ಆಶ್ರಮದಲ್ಲಿ ಸಭೆ ಸೇರಿದ್ದರು.
ಈ ವೇಳೆ ಬಿಕ್ರಮ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿದ್ಧಾರ್ಥ್ ಸಿಂಗ್ ಬೆಂಬಲಿಗರು ಹಾಗೂ ಮಾಜಿ ಸಚಿವ-ಮಹಾರಾಜಗಂಜ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಜಯ್ ಶಂಕರ್ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ್ದಾರೆ. ಬೇರೆ ನಾಯಕರ ವಿರುದ್ಧ ಘೋಷಣೆಯನ್ನು ಪರಸ್ಪರ ಕೂಗಿಕೊಂಡು ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ.