ಕರ್ನಾಟಕ

karnataka

ETV Bharat / bharat

ಕೊರೊನಾ ಸೋಂಕಿತರಿಗೆ ಔಷಧ ನೀಡುವ ರೋಬೋ... ಸೊಂಕು ಹರಡುವುದರಿಂದ ದೂರು ಉಳಿಯಲು ಪ್ಲಾನ್​! - ರೋಬೊಟ್​

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ನರ್ಸ್​ಗಳಲ್ಲೂ ಇದು ಹರಡುವ ಭೀತಿ ಹೆಚ್ಚುತ್ತಿದೆ.

robot gives medication in jaipur sawai man singh hospital
robot gives medication in jaipur sawai man singh hospital

By

Published : Mar 28, 2020, 9:36 PM IST

ಜೈಪುರ್​: ಕೊರೊನಾ ಸೋಂಕಿತರ ಸಂಖ್ಯೆ ಭಾರತದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅದನ್ನ ತಡೆಗಟ್ಟುವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒಂದು ದೊಡ್ಡ ತಲೆನೋವಾಗಿದೆ. ಇದರ ಮಧ್ಯೆ ಜೈಪುರ್​ದಲ್ಲಿರುವ ಸವಾಯಿ ಮಾನ್​ ಸಿಂಗ್​ ಆಸ್ಪತ್ರೆಯ ವೈದ್ಯರು ಮಹತ್ವದ ಕೆಲಸ ಮಾಡಿದ್ದಾರೆ.

ಕೊರೊನಾ ಸೋಂಕಿತರಿಗೆ ಔಷಧ ನೀಡುವ ರೋಬೋ

ಕೊರೊನಾ ವೈರಸ್​ನಿಂದ ಬಳಲುತ್ತಿರುವ ಕೆಲ ಪ್ರಕರಣಗಳು ಸವಾಯಿ ಮಾನ್​ ಸಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇವರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ನರ್ಸ್​ಗಳಿಗೂ ಸೋಂಕು ತಗಲುವ ಸಾಧ್ಯತೆ ದಟ್ಟವಾಗಿರುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ಔಷಧ ಹಾಗೂ ಅಗತ್ಯ ವಸ್ತು ನೀಡಲು ರೋಬೋ ಹುಟ್ಟುಹಾಕಲಾಗಿದ್ದು, ಅದೇ ಸೋಂಕಿತರಿಗೆ ಔಷಧ, ಊಟ ಸೇರಿದಂತೆ ಅಗತ್ಯ ವಸ್ತು ಪೂರೈಕೆ ಮಾಡುತ್ತಿದೆ.

ಕೊರೊನಾ ಸೋಂಕಿತರಿಗೆ ಔಷಧಿ ನೀಡುವ ರೋಬೋ

ಆಸ್ಪತ್ರೆ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೋಂಕಿತರಿಗೆ ಮಾತ್ರ ಈ ರೋಬೋ ಔಷಧ ನೀಡ್ತಿದ್ದು, ಹೀಗಾಗಿ ಕೊರೊನಾ ವೈರಸ್​ ಹರಡುವುದಕ್ಕೆ ಇಲ್ಲಿನ ಆಸ್ಪತ್ರೆ ಬ್ರೇಕ್​ ಹಾಕಿದೆ.

ABOUT THE AUTHOR

...view details