ಕರ್ನಾಟಕ

karnataka

ETV Bharat / bharat

ಇಂದು ಭಾರತದ ಮೊದಲ ಪ್ರೋಟೀನ್​ ದಿನ: ''ಪ್ರೋಟೀನ್ ಮೆ ಕ್ಯಾ ಹೇ..?''

ಭಾರತದಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿದೆ. ಈ ಅಪೌಷ್ಟಿಕತೆ ನಿವಾರಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ. ಈಗ ಇದರ ಸಾಲಿಗೆ ಪ್ರೋಟೀನ್​ ದಿನವೂ ಸೇರ್ಪಡೆಯಾಗಿದ್ದು, ಭಾರತ ಇಂದು ಮೊದಲ ಪ್ರೋಟೀನ್​ ದಿನವನ್ನು ಆಚರಿಸುತ್ತಿದೆ.

India's First Protein Day
ಇಂದು ಭಾರತದ ಮೊದಲ ಪ್ರೋಟೀನ್​ ದಿನ

By

Published : Feb 27, 2020, 5:11 PM IST

ಮುಂಬೈ: ಭಾರತದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಾಗೂ ಪ್ರೋಟೀನ್​ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ಭಾರತದ ಮೊದಲ ಪ್ರೋಟೀನ್​ ದಿನವನ್ನು ಘೋಷಿಸಲಾಗಿದೆ. ಈ ಮೂಲಕ ಭಾರತೀಯ ನಾಗರಿಕರಿಗೆ ಪ್ರೋಟೀನ್​ ಪಡೆಯುವುದು ಹೇಗೆ..? ಪ್ರೋಟೀನ್​ ದೇಹಕ್ಕೆ ಎಷ್ಟು ಉಪಯೋಗ..? ಯಾವ ಯಾವ ಮೂಲಗಳಿಂದ ಪ್ರೋಟೀನ್​ ದೊರಕುತ್ತದೆ ಎಂಬುದನ್ನು ಸವಿಸ್ತಾರವಾಗಿ ಜನರಿಗೆ ಅರಿವು ಮೂಡಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ಇದರಲ್ಲಿ ಸಸ್ಯ ಮತ್ತು ಪ್ರಾಣಿ ಜನ್ಯ ಪ್ರೋಟೀನ್​ ಬಗ್ಗೆಯೂ ಕೆಲವು ಮಹತ್ವವಾದ ವಿಷಯಗಳನ್ನು ಒದಗಿಸಿಕೊಡಲಾಗುತ್ತದೆ.

ಇಂದು ಭಾರತದ ಮೊದಲ ಪ್ರೋಟೀನ್​ ದಿನ

ರೈಟ್​ ಟು ಪ್ರೋಟೀನ್​ ಎಂಬ ಅಭಿಯಾನ ಈ ದಿನವನ್ನು ಘೋಷಿಸಿದ್ದು, ಜಾಗತಿಕವಾಗಿ ಈಗಾಗಲೇ ಸಾಕಷ್ಟು ರಾಷ್ಟ್ರಗಳು ಪ್ರೋಟೀನ್​ ದಿನವನ್ನು ಈ ಮೊದಲಿನಿಂದಲೂ ಆಚರಿಸುತ್ತಿವೆ. ಈ ವರ್ಷದಿಂದ ಭಾರತವೂ ಕೂಡಾ ಪ್ರೋಟೀನ್​ ದಿನವನ್ನು ಅಳವಡಿಸಿಕೊಳ್ಳುತ್ತಿದೆ. ಅಪೌಷ್ಟಿಕತೆ ನಿವಾರಣೆಗಾಗಿ ಹಾಗೂ ದೀರ್ಘಕಾಲದ ಆರೋಗ್ಯ ಸುಧಾರಣೆಗಾಗಿ ಪ್ರೋಟೀನ್​ ಅನಿವಾರ್ಯವಿದ್ದು ಇದಕ್ಕಾಗಿ ಪ್ರೋಟೀನ್​ ದಿನ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಪ್ರೋಟೀನ್​ ಮೆ ಕ್ಯಾ ಹೇ..? ( ಪ್ರೋಟೀನ್​ನಲ್ಲಿ ಏನಿದೆ..?) ಎಂಬುದು 2020ನೇ ವರ್ಷದ ಪ್ರೋಟೀನ್​ ದಿನದ ಘೋಷವಾಕ್ಯ. ಪ್ರೋಟೀನ್​ ಅನಿವಾರ್ಯತೆ ಬಗ್ಗೆ ಜನರಿಗೆ ಮನವರಿಕೆ ಮಾಡಲು ಈ ಘೋಷವಾಕ್ಯ ರೂಪಿಸಲಾಗಿದೆ.

ಭಾರತದ ಮೊದಲ ಪ್ರೋಟೀನ್​ ದಿನದ ಬಗ್ಗೆ ಮಾತನಾಡಿರುವ ನ್ಯಾಷನಲ್​ ಡಯಟಿಂಗ್​ ಅಸೋಸಿಯೇಷನ್​​​ ಅಧ್ಯಕ್ಷೆ ಡಾ.ಜಗಮೀತ್​ ಮದನ್​​, ''ಪೌಷ್ಟಿಕಾಂಶಗಳ ವಿಚಾರದಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಭಾರತೀಯ ಪ್ರೋಟೀನ್​ ದಿನವನ್ನು ಆಚರಿಸುವ ಮೂಲಕ ಮೊದಲ ಹೆಜ್ಜೆ ಇಡಲಾಗಿದೆ. ಈ ದಿನ ಆರೋಗ್ಯವಂತ ರಾಷ್ಟ್ರಕ್ಕೆ ಮೊದಲ ಹೆಜ್ಜೆಯಾಗಲಿದೆ'' ಎಂದಿದ್ದಾರೆ. ಈ ದಿನದ ಮೂಲ ಉದ್ದೇಶ ಪ್ರೋಟೀನ್​ ಬಗ್ಗೆ ಇರುವ ಜ್ಞಾನವನ್ನು ಪಸರಿಸಿ ಭಾರತೀಯ ಪ್ರಜೆಗಳು ನಿತ್ಯ ತಾವು ತಿನ್ನುವ ಆಹಾರದಲ್ಲಿ ಅವಶ್ಯವಿರುವಷ್ಟು ಪ್ರೋಟೀನ್​ ಅನ್ನು ಸೇವಿಸುವಂತೆ ಮಾಡುವುದಾಗಿದೆ. ಇದು ಗ್ರಾಮೀಣ ಹಾಗೂ ನಗರ ಭಾಗದ ಜನತೆಯನ್ನು ಒಳಗೊಂಡಿದ್ದು ಎಲ್ಲರಿಗೂ ಪ್ರೋಟೀನ್​ ಮಹತ್ವವನ್ನು ತಿಳಿಸಿಕೊಡುತ್ತದೆ.

ABOUT THE AUTHOR

...view details