ನವದೆಹಲಿ: ಕೊರೊನಾ ಲಾಕ್ಡೌನ್ ನಡುವೆ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ನೌಕರರು ಕಾರ್ಯನಿರ್ವಹಿಸುವಂತಾಗಿದೆ. ಆದರೆ ತುಟ್ಟಿ ಭತ್ಯೆ ಕುರಿತಂತೆ ಹಲವು ಗೊಂದಲಗಳು ಏರ್ಪಟ್ಟಿತ್ತು. ಇದೀಗ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನೌಕರರಿಗೆ ತುಟ್ಟಿ ಭತ್ಯೆ ಭರಿಸಲು ನಿರ್ದೇಶನ ಕೋರಿ ನಿವೃತ್ತ ಮೇಜರ್ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ನಿವೃತ್ತ ಮೇಜರ್ ಓಂಕಾರ್ ಸಿಂಗ್ ಗುಲ್ಬೇರಿಯಾ ಅರ್ಜಿ ಸುಲ್ಲಿಸಿದ್ದು, ಈ ಅರ್ಜಿಯೂ ತುಟ್ಟಿ ಭತ್ಯೆಯನ್ನು ವಿವಿಧ ಹಣಕಾಸು ಪ್ಯಾಕೇಜ್ ಹಾಗೂ ಭವಿಷ್ಯದಲ್ಲಿ ವ್ಯಾಪಾರ ಸಂಸ್ಥೆಗಳಿಗೆ ನೀಡಲು ಯೋಜಿಸಲಾಗಿದ್ದನ್ನು ನಿಲ್ಲಿಸಬೇಕು ಎಂದು ಕೇಂದ್ರಕ್ಕೆ ಸೂಚನೆ ನೀಡುತ್ತದೆ.