ಕರ್ನಾಟಕ

karnataka

ETV Bharat / bharat

500 ಎಕರೆ ಆಸ್ತಿ ದೇಶಕ್ಕೇ ಮೀಸಲಿಟ್ಟ ಮಹಾನುಭಾವ.. ನಿವೃತ್ತ ಸೈನಿಕನಿಂದ ₹1.08 ಕೋಟಿ ಸೇನೆಗೆ ದಾನ! - Kannada news

ಒಂದ್‌ ಟೈಮ್‌ನಲ್ಲಿ ಇವರ ಜೇಬಿನಲ್ಲಿ ಬರೀ 5 ರೂ. ಮಾತ್ರ ಇತ್ತಂತೆ. ಕಷ್ಟಪಟ್ಟು ದುಡಿದು ಈಗ 500 ಎಕರೆ ಆಸ್ತಿ ಒಡೆಯನಾಗಿದ್ದಾರೆ. 5 ಎಕರೆ ಪತ್ನಿಗೆ ಮತ್ತು 10 ಎಕರೆ ಭೂಮಿ ಮಗಳಿಗಾಗಿ ಇರಿಸಿದ್ದಾರೆ. ಉಳಿದ ಎಲ್ಲ ಆಸ್ತಿಯನ್ನೂ ಸಮಾಜಕ್ಕೆ ಕೊಟ್ಟಿದ್ದಾರೆ.

500 ಎಕರೆ ಆಸ್ತಿ ದೇಶಕ್ಕೇ ಮೀಸಲಿಟ್ಟ ಮಹಾನುಭಾವ

By

Published : Jul 16, 2019, 9:43 PM IST

ದೆಹಲಿ :ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆವರಂತೆ ಕಾಣಿರೋ ಎಂಬ ಪುರಂದರದಾಸರ ವಾಣಿಯಂತೆ ಏರ್‌ಫೋರ್ಸ್‌ನ ನಿವೃತ್ತ ಏರ್‌ಮೆನ್‌ವೊಬ್ಬರು ಬದುಕ್ತಿದ್ದಾರೆ. ಜೀವನ ಪೂರ್ತಿ ದುಡಿದ ಕೋಟಿಗೂ ಅಧಿಕ ಬೆಲೆ ಬಾಳುವ ಆಸ್ತಿಯನ್ನೆಲ್ಲ ಭಾರತೀಯ ಸೇನೆಗೆ ದಾನವಾಗಿ ಕೊಟ್ಟಿದ್ದಾರೆ.

500 ಎಕರೆ ಆಸ್ತಿ ದೇಶಕ್ಕೇ ಮೀಸಲಿಟ್ಟ ಮಹಾನುಭಾವ

ಕುಕ್ಕಟ ಉದ್ಯಮ ಕೈ ಹಿಡಿಯಿತು, ಕೋಟಿಗಟ್ಟಲೇ ಕಾಸು ಕೊಟ್ತು!

74 ವರ್ಷದ ಸಿಬಿಆರ್‌ ಪ್ರಸಾದ್ ಏರ್‌ಫೋರ್ಸ್‌ನ ನಿವೃತ್ತ ಏರ್‌ಮೆನ್‌. ಇವರೇ ತಮ್ಮ ಉಳಿತಾಯದ ₹1.08 ಕೋಟಿ ಹಣ ರಕ್ಷಣಾ ಇಲಾಖೆಗೆ ದಾನ ನೀಡಿದ್ದಾರೆ. 40 ವರ್ಷದ ಹಿಂದೆ ನಿವೃತ್ತರಾಗಿದ್ದ ಪ್ರಸಾದ್‌ ಜೀವನಾಧಾರಕ್ಕೆ ಸಣ್ಣ ಕೋಳಿ ಫಾರ್ಮ್‌ ಹಾಕಿದ್ದರು. ಅದು ಇವರ ಕೈ ಹಿಡಿದು, ಕೈತುಂಬ ಕಾಸು ತಂದ್ಕೊಟ್ಟಿದೆ. ನಿವೃತ್ತಿ ಬಳಿಕ ರೈಲ್ವೆ ಇಲಾಖೆಯಲ್ಲಿ ಆಫರ್ ಬಂದಿತ್ತು. ಆದರೆ, ಆ ಕೆಲಸ ಯಾಕೋ ಏನೋ ಸಿಗಲಿಲ್ಲ. ಆಗ ಆರಂಭಿಸಿದ್ದ ಕುಕ್ಕಟ ಉದ್ಯಮ 30 ವರ್ಷದಿಂದ ಸಾಕಷ್ಟು ಆದಾಯ ತಂದ್ಕೊಟ್ಟಿದೆ. ಏರ್‌ಫೋರ್ಸ್‌ನಲ್ಲಿ 9 ವರ್ಷ ಸೇವೆಗೈದಿದ್ದ ಪ್ರಸಾದ್‌, ಸೇನೆಯಿಂದ ಪಡೆದಿದ್ದನ್ನ ವಾಪಸ್‌ ಕೊಡ್ಬೇಕೆಂದು ನಿರ್ಧರಿಸಿದ್ದರಂತೆ. ಕುಟುಂಬ ಸದಸ್ಯರೂ ಇದಕ್ಕೆ ಬೆಂಬಲಿಸಿದ್ದಾರೆ. ಶೇ. 2ರಷ್ಟು ಪಾಲು ಮಗಳಿಗೆ ಮತ್ತು ಶೇ. 1ರಷ್ಟು ಆಸ್ತಿಯನ್ನ ಪತ್ನಿ ಹೆಸರಿಗೆ ಮಾಡಿ, ಉಳಿದ ಆಸ್ತಿಯನ್ನೆಲ್ಲ ಸೇನೆಗೆ ನೀಡಿದ್ದಾರೆ. ಒಬ್ಬ ಸಣ್ಣ ಸೈನಿಕ ಇಷ್ಟೊಂದು ಹಣ ಸೇನೆಗೆ ನೀಡ್ತಿರೋದನ್ನ ಕಂಡ ಸ್ವತಃ ಡಿಫೆನ್ಸ್‌ ಮಿನಿಸ್ಟರ್‌ ರಾಜನಾಥ್‌ ಸಿಂಗ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜನಾಥ್ ಸಿಂಗ್‌ ಅವರನ್ನ ಭೇಟಿ ಮಾಡಿ ಪ್ರಸಾದ್‌ ಚೆಕ್‌ನ ಹಸ್ತಾಂತರಿಸಿದ್ದಾರೆ.

500 ಎಕರೆ ಆಸ್ತಿ ದೇಶಕ್ಕೇ ಮೀಸಲಿಟ್ಟ ಮಹಾನುಭಾವ

ಈ ಉದಾರ ಗುಣದ ಹಿಂದೆ ದೊಡ್ಡದೊಂದು ಕಥೆಯೇ ಇದೆ!

ಆಗ ಪ್ರಸಾದ್‌ಗೆ 20 ವರ್ಷ. ಏರ್‌ಫೋರ್ಸ್‌ನಲ್ಲಿ ಏರ್‌ಮೆನ್‌ ಆಗಿದ್ದರು. ಜಿ ಡಿ ನಾಯ್ಡು ಅನ್ನೋ ಕೊಯಿಮತ್ತೂರಿನ ಒಬ್ಬ ಜೆಂಟಲ್‌ಮೆನ್‌ ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮವೊಂದಕ್ಕೆ ಬಂದಿದ್ರಂತೆ. ಅದರಲ್ಲೂ ಪ್ರಸಾದ್‌ ಕೂಡ ಪಾಲ್ಗೊಂಡಿದ್ದರು. ಭಾರತ ಒಂದು ಅದ್ಭುತ ದೇಶ. ಋಷಿಮುನಿಗಳು ತಾವು ತಪಸ್ಸುಗೈದು ಸಾಧಿಸಿದ್ದನ್ನೂ ಸಮಾಜಕ್ಕೆ ವಾಪಸ್‌ ಕೊಡುಗೆ ಕೊಟ್ಟಿದ್ದಾರೆ. ಆದರೆ, ಮನುಷ್ಯರು ಮಾತ್ರ ಬರೀ ಕುಟುಂಬಕ್ಕಾಗಿ ಬದುಕುತ್ತಿದ್ದೇವೆ. ಬರೋವಾಗ ಏನೂ ತಂದಿರೋದಿಲ್ಲ, ಹೋಗೋವಾಗಲೂ ಏನೂ ತೆಗೆದುಕೊಂಡು ಹೋಗೋದಿಲ್ಲ. ಕುಟುಂಬಕ್ಕೆ ಬೇಕಾಗಿದ್ದನ್ನ ನೀಡಿ ಉಳಿದ ಪಾಲನ್ನ ಸಮಾಜಕ್ಕೆ ವಾಪಸ್ ದಾನ ಮಾಡ್ಬೇಕು ಅಂತಾ ನಾಯ್ಡು ಹೇಳಿದ್ದರಂತೆ. ಆ ಮಾತು ಪ್ರಸಾದ್ ಅವರನ್ನ ಗಾಢವಾಗಿ ಪ್ರಭಾವಿಸಿತ್ತಂತೆ.

500 ಎಕರೆ ಆಸ್ತಿ ದೇಶಕ್ಕೇ ಮೀಸಲಿಟ್ಟ ಮಹಾನುಭಾವ

ದೇಶಕ್ಕಾಗಿ ಪದಕ ಗೆದ್ದು ತರಬೇಕೆಂಬ ಕನಸು ಕಂಡಿದ್ದ ಕರುಣಾಮಯಿ!

ಒಂದ್‌ ಟೈಮ್‌ನಲ್ಲಿ ಇವರ ಜೇಬಿನಲ್ಲಿ ಬರೀ 5 ರೂ. ಮಾತ್ರ ಇತ್ತಂತೆ. ಕಷ್ಟಪಟ್ಟು ದುಡಿದು ಈಗ 500 ಎಕರೆ ಆಸ್ತಿ ಒಡೆಯನಾಗಿದ್ದಾರೆ. 5 ಎಕರೆ ಪತ್ನಿಗೆ ಮತ್ತು 10 ಎಕರೆ ಭೂಮಿ ಮಗಳಿಗಾಗಿ ಇರಿಸಿದ್ದಾರೆ. ಉಳಿದ ಎಲ್ಲ ಆಸ್ತಿಯನ್ನೂ ಸಮಾಜಕ್ಕೆ ಕೊಟ್ಟಿದ್ದಾರೆ. ದೇಶಕ್ಕಾಗಿ ಒಲಿಂಪಿಕ್‌ ಪದಕ ಗೆಲ್ಬೇಕು ಅಂತಾ ಬಾಲ್ಯದಲ್ಲಿ ಪ್ರಸಾದ್‌ ಕನಸು ಕಂಡಿದ್ರಂತೆ. ಆದರೆ, ಅದು ಸಾಧ್ಯವಾಗದಿದ್ರೂ ಕಳೆದ 20 ವರ್ಷಗಳಿಂದ ಮಕ್ಕಳಿಗೆ ತಮ್ಮದೇ ಸ್ಪೋರ್ಟ್ಸ್‌ ಯೂನಿವರ್ಸಿಟಿಯಲ್ಲಿ ಕ್ರೀಡಾ ತರಬೇತಿ ನೀಡ್ತಿದ್ದಾರೆ. ಆ ಮಕ್ಕಳೆಲ್ಲ ಖಂಡಿತಾ ದೇಶಕ್ಕಾಗಿ ಪದಕ ಗೆದ್ಕೊಂಡು ಬಂದೇ ಬರ್ತಾರೆ ಅನ್ನೋ ವಿಶ್ವಾಸ ಈ ಹಿರಿಯ ಜೀವಕ್ಕಿದೆ. 50 ಎಕರೆ ವಿಸ್ತೀರ್ಣದಲ್ಲಿ ಒಂದು ಮಹಿಳಾ ಮತ್ತೆ 50 ಎಕರೆ ಜಾಗದಲ್ಲಿ ಪುರುಷರ ಸ್ಪೋರ್ಟ್ಸ್‌ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಅನ್ನೋದು ಪ್ರಸಾದ್‌ ಗುರಿ. ಪಡೆಯೋದಕ್ಕಿಂತ ಕೊಡೋದರಲ್ಲಿ ಸುಖ ಜಾಸ್ತಿಯಂತೆ. ಈ ಜೀವನ ಪಾಠವನ್ನ ಪ್ರಸಾದ್‌ ಚೆನ್ನಾಗಿ ಅರ್ಥೈಸಿಕೊಂಡಂತಿದೆ. ಇಂತವರ ಸಂಖ್ಯೆ ಇನ್ನಷ್ಟು ಮತ್ತಷ್ಟು ಹೆಚ್ಚಬೇಕಿದೆ.

500 ಎಕರೆ ಆಸ್ತಿ ದೇಶಕ್ಕೇ ಮೀಸಲಿಟ್ಟ ಮಹಾನುಭಾವ

ABOUT THE AUTHOR

...view details