ಕರ್ನಾಟಕ

karnataka

ETV Bharat / bharat

ಜ್ವಾಲಾಮುಖಿ ಎಂದರೇನು? : ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಜ್ವಾಲಾಮುಖಿಗಳು ಒಂದು ಗ್ರಹ ಭೌಗೋಳಿಕವಾಗಿ ಜೀವಂತವಾಗಿದೆ ಎಂಬುದರ ಸಂಕೇತವಾಗಿದೆ. ಇದು ಜೀವನಕ್ಕೆ ಸರಿಯಾದ ಪರಿಸ್ಥಿತಿಗಳನ್ನು ಬೆಂಬಲಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ವಿಜ್ಞಾನಿಗಳು ಜ್ವಾಲಾಮುಖಿಗಳ ವಿವಿಧ ಅಂಶಗಳನ್ನು ಅಧ್ಯಯನ ಮಾಡುತ್ತಿದ್ದಾರೆ..

By

Published : Dec 14, 2020, 12:38 PM IST

ಜ್ವಾಲಾಮುಖಿ
ಜ್ವಾಲಾಮುಖಿ

ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ.

ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿರುತ್ತವೆ.

ಜ್ವಾಲಾಮುಖಿ ಕುರಿತ ವಿಡಿಯೋ

ಜ್ವಾಲಾಮುಖಿಗಳು ನೆಲದಾಳದ ಟೆಕ್ಟಾನಿಕ್ ತಟ್ಟೆಗಳು ಒಂದಿನ್ನೊಂದರ ಬಳಿ ಸರಿದಾಗ ಇಲ್ಲವೇ ಪರಸ್ಪರ ದೂರ ಸರಿದಾಗ ಉಂಟಾಗುತ್ತವೆ. ಮಿಡ್-ಅಟ್ಲಾಂಟಿಕ್ ರಿಡ್ಜ್‌ನಲ್ಲಿ ಟೆಕ್ಟಾನಿಕ್ ತಟ್ಟೆಗಳು ಪರಸ್ಪರರಿಂದ ದೂರ ಸರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ.

ಹಾಗೆಯೇ ಪೆಸಿಫಿಕ್ ಅಗ್ನಿ ವರ್ತುಲ (ಪೆಸಿಫಿಕ್ ರಿಂಗ್ ಆಫ್ ಫಯರ್) ನಲ್ಲಿ ತಟ್ಟೆಗಳು ಪರಸ್ಪರರ ಬಳಿ ಸರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಗಮನಿಸಬೇಕಾದ ಅಂಶವೆಂದ್ರೆ ಟೆಕ್ಟಾನಿಕ್ ತಟ್ಟೆಗಳು ಒಂದರ ಮೇಲೆ ಇನ್ನೊಂದು ಸರಿದಾಗ ಜ್ವಾಲಾಮುಖಿಗಳು ಉಂಟಾಗುವುದಿಲ್ಲ. ಭೂಮಿಯ ಚಿಪ್ಪು ಸೆಳೆಯಲ್ಪಟ್ಟಾಗ ಅಥವಾ ತೆಳುವಾದಾಗ ಸಹ ಜ್ವಾಲಾಮುಖಿಗಳು ರೂಪುಗೊಳ್ಳುವುದುಂಟು.

ಜ್ವಾಲಾಮುಖಿ

ಹೊಸ ವಿಜ್ಞಾನಿಗಳ ಪ್ರಕಾರ ವಾಸ್ತವವಾಗಿ ಕಿಲಾವಿಯಾ ಜ್ವಾಲಾಮುಖಿ ತುಂಬಾ ಪ್ರಭಾವಶಾಲಿಯಾಗಿದೆ. ಇದು ಸುಮಾರು 60 ಬಾರಿ ಭೂಮಿಯ ಮೇಲೆ ಸ್ಫೋಟಗೊಂಡಿದೆ. ಸೌರಮಂಡಲವು ಅನೇಕ ಜ್ವಾಲಾಮುಖಿಗಳು ಮತ್ತು ವಿಚಿತ್ರ ಸ್ಫೋಟಗಳಿಗೆ ನೆಲೆಯಾಗಿದೆ.

ನಾವು ಸಾಮಾನ್ಯವಾಗಿ ಜ್ವಾಲಾಮುಖಿಯನ್ನು ಭೂಮಿಯ ಹೊರಪದರದಲ್ಲಿ ಆರಂಭಿಕವಾಗಿ ದ್ರವದ ರೂಪದಲ್ಲಿ ನಾವು ಕಾಣಬಹುದಾಗಿದೆ. ಇದು ಮೊದಲಿಗೆ ಸ್ಫೋಟಗೊಂಡು ಬಳಿಕ ಸಣ್ಣ ತುಂಡುಗಳಾಗಿ ಬೂದಿಯ ಮೋಡಗಳನ್ನು ರೂಪಿಸುತ್ತದೆ. ನಂತರ ನಾವು ಇದನ್ನು ಲಾವಾ ಎಂದು ಕರೆಯುತ್ತೇವೆ.

ಇದನ್ನು ಓದಿ:ಗಾಳಿಯಲ್ಲಿ ಗುಂಡು ಹಾರಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಯುವಕರು.. ಕೇಸ್​ ದಾಖಲು

ನಮ್ಮ ಗ್ರಹದಲ್ಲಿ ಟೆಕ್ಟೋನಿಕ್ ಪ್ಲೇಟ್‌ಗಳ ನಡುವೆ ಜ್ವಾಲಾಮುಖಿಗಳು ಹೆಚ್ಚಾಗಿ ರೂಪುಗೊಳ್ಳುತ್ತವೆ. ಅವುಗಳ ಮಧ್ಯದಲ್ಲಿಯೂ ಅವು ಕಾಣಿಸಿಕೊಳ್ಳಬಹುದು, ಅಲ್ಲಿ ಮಾಂಟಲ್ ಪ್ಲುಮ್ಸ್ ಎಂದು ಕರೆಯಲ್ಪಡುವ ಎತ್ತರದ ನೈಸರ್ಗಿಕ ಚಿಮಣಿಗಳು ಶಿಲಾಪಾಕವನ್ನು ಮೇಲ್ಮೈಗೆ ಕೊಂಡೊಯ್ಯುತ್ತವೆ ಎಂದು ಭಾವಿಸಲಾಗಿದೆ.

ಬುಧ, ಶುಕ್ರ ಮತ್ತು ಮಂಗಳ ಗ್ರಹಗಳ ಜ್ವಾಲಾಮುಖಿ ಪರಿಸ್ಥಿತಿ ಭೂಮಿಯಿಂದ ಬಹಳ ಭಿನ್ನವಾಗಿದೆ. ಮಂಗಳವು ಭೂಮಿಯ ಪರಿಮಾಣದ ಶೇ.15ರಷ್ಟಿದೆ ಮತ್ತು ಬುಧ ಇನ್ನೂ ಚಿಕ್ಕದಾಗಿದೆ, ಆದ್ದರಿಂದ ಬಹುತೇಕ ಎಲ್ಲಾ ಉಷ್ಣತೆಯು ಈ ಗ್ರಹಗಳಿಂದ ದೂರವಿರುತ್ತದೆ. ಅವುಗಳ ಮೇಲ್ಮೈಗಳು ಪ್ರಾಚೀನ ಜ್ವಾಲಾಮುಖಿಯ ಅವಶೇಷಗಳಲ್ಲಿ ಆವರಿಸಲ್ಪಟ್ಟಿವೆ. ಆದರೆ, ಈಗ ಶಾಂತವಾಗಿ ನಿಂತಿವೆ. ಭೂಮಿಗೆ ಹೋಲಿಸಿದ್ರೆ ಕೇವಲ ಒಂದು ನೆರಳು ಇರುವ ಶುಕ್ರ ಮಾತ್ರ ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿದೆ.

ಜ್ವಾಲಾಮುಖಿ

ಮಂಗಳನ ಆಚೆಗಿನ ಪ್ರದೇಶಗಳಲ್ಲಿ ತಾಪಮಾನವು ತುಂಬಾ ಶೀತ ಮತ್ತು ಚಳಿಯಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಇಲ್ಲಿ ಜ್ವಾಲಾಮುಖಿಗಳು ರೂಪುಗೊಳ್ಳುತ್ತವೆ ಎಂದು ನಿರೀಕ್ಷಿಸಲಾಗುವುದಿಲ್ಲ. ಇದು ತುಂಬಾ ಶೀತವಾಗಿರುವುದರಿಂದ, ನೀರು, ಅಮೋನಿಯಾ ಮತ್ತು ಇಂಗಾಲದ ಡೈಆಕ್ಸೈಡ್​ನಂತಹ ದ್ರವಗಳು ಅಥವಾ ಅನಿಲಗಳು ಘನ-ಸ್ಥಿತಿಯಲ್ಲಿರುತ್ತವೆ.

ಅಷ್ಟೇ ಅಲ್ಲ, ಜ್ವಾಲಾಮುಖಿಯ ಬಾಯಿಯ ಪ್ರದೇಶದಲ್ಲಿ ಮೋಡ ಕಟ್ಟಿರುವುದು, ಸಹ ಅದರ ಸಕ್ರಿಯೆತೆಗೆ ಸಾಕ್ಷಿ ಎಂದು ತಜ್ಞರು ಹೇಳಿದ್ದಾರೆ. ಜ್ವಾಲಾಮುಖಿ ಇರುವ ಪ್ರದೇಶದಲ್ಲಿರುವ ಭೂಮಿ ಹಾಗೂ ನೀರ ಮಾದರಿಯನ್ನು ಪರೀಕ್ಷಿಸಿದಾಗ, ಕಲ್ಲಿದ್ದಲಿನಂತಿರುವ ಉಷ್ಣರೂಪಿತ (ಪೈರೋಕ್ಲಾಸ್ಟಿಕ್‌) ಪದಾರ್ಥ ದೊರೆತಿದೆ. ಇದು ಜ್ವಾಲಾಮುಖಿಯ ಉಗುಳುವಿಕೆಯಿಂದಲೇ ಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ABOUT THE AUTHOR

...view details