ನವದೆಹಲಿ:ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಪಕ್ಷವು ಭಾರತದ ಸಂವಿಧಾನದ ಪ್ರತಿಯೊಂದನ್ನ ಟ್ವಿಟ್ಟರ್ನಲ್ಲಿ ಹಾಕಿದ್ದು, ಪ್ರಧಾನಿಯವರು ಸಮಯ ಸಿಕ್ಕಾಗ ಇದನ್ನು ಓದಬೇಕೆಂದು ಒತ್ತಾಯಿಸಿದೆ.
ಹೌದು, ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ರೀತಿಯ ಪೋಸ್ಟ್ ಮಾಡಿದ್ದು, "ಆತ್ಮೀಯ ಪ್ರಧಾನಿ, ಸಂವಿಧಾನವು ಶೀಘ್ರದಲ್ಲೇ ನಿಮ್ಮನ್ನು ತಲುಪುತ್ತಿದೆ. ನಿಮಗೆ ಸಮಯ ಸಿಕ್ಕಾಗ, ದಯವಿಟ್ಟು ಅದನ್ನು ಓದಿ. ಅಭಿನಂದನೆಗಳು, ಕಾಂಗ್ರೆಸ್ ಎಂದು ಟ್ವೀಟ್ನ್ನು ಮಾಡಲಾಗಿದೆ.