ಮುಂಬೈ:ಟೆಲಿಕಾಂ ಇಂಡಸ್ಟ್ರೀಯಲ್ಲಿ ಈಗಾಗಲೇ ಮಹತ್ವದ ಹೆಜ್ಜೆ ಇಟ್ಟಿರುವ ರಿಲಯನ್ಸ್ ಸದ್ಯ ಮತ್ತೊಂದು ಮಹತ್ವಾಕಾಂಕ್ಷಿ ಕಾರ್ಯಕ್ಕೆ ಕೈಹಾಕಲು ಯೋಚನೆ ಮಾಡಿದೆ.
ಮುಂದಿನ ಎರಡು ವರ್ಷಗಳಲ್ಲಿ 200 ಮಿಲಿಯನ್ ಸ್ಮಾರ್ಟ್ಫೋನ್ ಹೊರತರುವ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಎಲ್ಲ ರೀತಿಯಲ್ಲೂ ಸಜ್ಜಾಗುವಂತೆ ರಿಲಯನ್ಸ್ ಸ್ಥಳೀಯ ಪೂರೈಕೆದಾರರಿಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಗೂಗಲ್ ಆ್ಯಂಡ್ರಾಯ್ಡ್ ವ್ಯವಸ್ಥೆ ಜತೆ ಕಾರ್ಯನಿರ್ವಹಿಸಬಲ್ಲ ಕೇವಲ 4 ಸಾವಿರ ರೂ.ಗೆ ಲಭ್ಯವಾಗುವ ರೀತಿಯಲ್ಲಿ ಜಿಯೋ ಸ್ಮಾರ್ಟ್ಫೋನ್ ಸಿದ್ಧಪಡಿಸಲು ನಿರ್ಧರಿಸಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ದೇಶಿ ಕಂಪನಿಗಳೊಂದಿಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.
ಏರ್ಟೆಲ್ - ವೋಡಾಫೋನ್ ಐಡಿಯಾ ಜತೆ ಪೋಸ್ಟ್ಪೇಯ್ಡ್ ಸಮರಕ್ಕಿಳಿದ ಜಿಯೋ!
ಮುಂದಿನ ಎರಡು ವರ್ಷಗಳಲ್ಲಿ 15 ಕೋಟಿಯಿಂದ 20 ಕೋಟಿ ಮೊಬೈಲ್ ಮಾರಾಟ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಪ್ರಮುಖವಾಗಿ 4ಜಿ ಮೊಬೈಲ್ ಫಿಚರ್ ಮೊಬೈಲ್ಗಳು ಇವಾಗಲಿವೆ ಎನ್ನಲಾಗಿದೆ. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮಾತನಾಡಿದ್ದು, ದೇಶದ ಸ್ಮಾರ್ಟ್ಫೋನ್ ಉದ್ಯಮವನ್ನು ದೇಶಿಕರೀಸುವ ಗುರಿ ಹೊಂದಿದ್ದಾಗಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ರಿಲಯನ್ಸ್ನ ಯಾವುದೇ ಪ್ರತಿನಿಧಿಗಳು ಮಾಹಿತಿ ನೀಡಿಲ್ಲ.