ನಿದ್ರೆ ಎಂಬುದು ಕೇವಲ ದೈಹಿಕ ಮತ್ತು ಮಾನಸಿಕ ವಿಶ್ರಾಂತಿಗೆ ಮಾತ್ರವಲ್ಲ, ಇದನ್ನು ಮಾಡುವುದರಿಂದ ನಮ್ಮ ದೇಹ ಸಾಮರ್ಥ ಹೆಚ್ಚುವುದರ ಜೊತೆಗೆ ಒತ್ತಡ ಕೂಡ ಕಡಿಮೆ ಮಾಡುತ್ತದೆ. ಅನೇಕ ಬಾರಿ ನಮ್ಮ ನಿದ್ರೆ ತೊಂದರೆಗೀಡಾಗುತ್ತದೆ ಮತ್ತು ನಾವು ಬಯಸಿದಷ್ಟು ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲಾ ಒತ್ತಡ ಮತ್ತು ಆತಂಕವೂ ಕಾರಣವಾಗಿರಬಹುದು. ನಿದ್ರೆಗೆ ಇರುವ ತೊಂದರೆಗಳನ್ನು ನಾವು ಆಯುರ್ವೇದದ ಮೂಲಕ ಹೇಗೆ ಎದುರಿಸಬಹುದು ಎಂಬುದನ್ನು ಹೈದರಾಬಾದ್ನ ಎಎಮ್ಡಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ. ರಾಜ್ಯಲಕ್ಷ್ಮಿ ಮಾಧವಂ ಹೇಳಿದ್ದಾರೆ.
ನಿದ್ರೆ ಎನ್ನುವುದು ಆಹಾರ, ನೀರು, ಗಾಳಿಯಂತೆಯೇ ದೇಹಕ್ಕೆ ಒಂದು ಪ್ರಮುಖ ಜೈವಿಕ ಪ್ರಕ್ರಿಯೆ ಮತ್ತು ಅವಶ್ಯಕತೆಯಾಗಿದೆ. ನಿದ್ರೆಯ ಸಮಯದಲ್ಲಿ ನಮ್ಮ ದೇಹವು ಅನಾಬೊಲಿಕ್ ಸ್ಥಿತಿಗೆ ಬರುತ್ತದೆ. ಅದು ದೇಹದ ಅಂಗಾಂಶಗಳನ್ನು ಮತ್ತು ಅಂತಿಮವಾಗಿ ರೋಗನಿರೋಧಕ ಶಕ್ತಿಯನ್ನು ಪುನಃಸ್ಥಾಪಿಸುತ್ತದೆ. ಆರೋಗ್ಯಕರ ನಿದ್ರೆಯನ್ನು ಅವಧಿ, ಗುಣಮಟ್ಟ, ಸೂಕ್ತ ಸಮಯ ಮತ್ತು ಕ್ರಮಬದ್ಧತೆಯಿಂದ ಅಳೆಯಬಹುದಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಸಾಕಷ್ಟು ಪ್ರಮಾಣದ ನಿದ್ರೆ ಅಂದರೆ 7-9 ಗಂಟೆಗಳ ನಿದ್ರೆಯನ್ನು ಸಾಮಾನ್ಯವಾಗಿ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಶಿಫಾರಸು ಮಾಡಲಾಗುತ್ತದೆ.
ನಿದ್ರೆಯ ಪರಿಣಾಮಗಳು:
ಕೋವಿಡ್-19 ನಂತಹ ಪರಿಸ್ಥಿತಿಯಲ್ಲಿ ನಿದ್ರೆಯೂ ತುಂಬಾ ಅವಶ್ಯಕವಾಗಿದ್ದು, ಎಲ್ಲಾ ಇತರ ಬಾಧಕಗಳ ಜೊತೆಗೆ ಇದು ನಮ್ಮ ರೋಗನಿರೋಧಕ ಶಕ್ತಿಯಾಗಿದೆ. ಸೈಟೊಕಿನ್ಸ್ ಎಂಬ ಅಂಶ ನಮ್ಮ ದೇಹದಲ್ಲಿ ಪ್ರೋಟೀನ್‌ಗಳ ಉತ್ಪಾದನೆ ಮಾಡುತ್ತದೆ. ನಾವು ವೈರಸ್, ಬ್ಯಾಕ್ಟೀರಿಯಾ ಅಥವಾ ರೋಗಕಾರಕಗಳಿಂದ ಸೋಂಕಿಗೆ ಒಳಗಾದಾಗ ಸೈಟೊಕಿನ್‌ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ನಿದ್ರೆಯ ಕೊರತೆಯೂ ಇದಕ್ಕೆ ಅಡ್ಡಿಯಾಗಬಹುದು. ಅಲ್ಲದೇ ನಿದ್ರೆ ಸಮರ್ಪಕವಾಗಿಲ್ಲದಿದ್ದರೆ ಟಿ-ಕೋಶಗಳು ಅಥವಾ ಫೈಟರ್ ಕೋಶಗಳ (ಸೋಂಕುಗಳ ವಿರುದ್ಧ ಕಾರ್ಯನಿರ್ವಹಿಸುವ) ಕಾರ್ಯನಿರ್ವಹಣೆಯು ದುರ್ಬಲಗೊಳ್ಳುತ್ತದೆ.
ಉತ್ತಮ ನಿದ್ರೆಗಾಗಿ ಏನು ಮಾಡಬೇಕು:
ಗ್ರೀಷ್ಮಾ ಋತು (ಬೇಸಿಗೆ) ಹೊರತುಪಡಿಸಿ ಬೇರೆ ಸಮಯದಲ್ಲಿ ಹಗಲು ವೇಳೆ ನಿದ್ರೆ ಮಾಡುವುದನ್ನು ತಪ್ಪಿಸಿ. ಇದು ಯಾವಾಗಲೂ ವಿರುದ್ಧ ಚಿಹ್ನೆಯನ್ನು ಹೊಂದಿದೆ. ವಯಸ್ಸಾದ ಅಥವಾ ದುರ್ಬಲ ಜನರು ಮಾತ್ರ ಹಗಲಿನ ವೇಳೆಯಲ್ಲಿ ಮಲಗಿ.
ಹಗಲಿನ ವೇಳೆಯಲ್ಲಿ ಸಕ್ರಿಯರಾಗಿರಿ. ನಿಮಗೆ ಸೂಕ್ತವಾದ ಯಾವುದಾದರೂ ಧ್ಯಾನ, ಪ್ರಾಣಾಯಾಮ, ಯೋಗ ಮುಂತಾದ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ.