ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ ಸ್ಥಳೀಯ ಬಿಜೆಪಿ ವಕ್ತಾರನ ವಿರುದ್ಧ ಅತ್ಯಾಚಾರ ಆರೋಪ

47 ವರ್ಷದ ಮಹಿಳೆ ಮೇಲೆ ತೆಲಂಗಾಣದ ಪತಂಚೇರುವಿನ ರಾಜ್ಯ ಬಿಜೆಪಿ ವಕ್ತಾರ ಎಂ. ರಘುನಂದನ್ ರಾವ್ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿದೆ.

rape-case
rape-case

By

Published : Feb 4, 2020, 1:34 PM IST

ಹೈದರಾಬಾದ್​(ತೆಲಂಗಾಣ): 2007ರಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ತೆಲಂಗಾಣದ ಸ್ಥಳೀಯ ಬಿಜೆಪಿ ವಕ್ತಾರ, ವಕೀಲನ ವಿರುದ್ಧ ದೂರು ದಾಖಲಾಗಿದೆ.

47 ವರ್ಷದ ಮಹಿಳೆ ಮೇಲೆ ತೆಲಂಗಾಣದ ಪತಂಚೇರುವಿನ ರಾಜ್ಯ ಬಿಜೆಪಿ ವಕ್ತಾರ ಎಂ. ರಘುನಂದನ್ ರಾವ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಆರ್​ಸಿ ಪುರಂ ಪೊಲೀಸ್​ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾರೆ.

ವೃತ್ತಿಯಲ್ಲಿ ವಕೀಲನಾಗಿರುವ ರಘುನಂದನ್ ಬಳಿ ಸಂತ್ರಸ್ತೆ 2003ರಲ್ಲಿ ತನ್ನ ಪತಿ ವಿರುದ್ಧ ಕಿರುಕುಳ ಮತ್ತು ಜೀವನಾಂಶ ಕೋರಿ ಕೇಸ್​ ನೀಡಿದ್ದರು. 2007ರಲ್ಲಿ ಆ ಕೇಸಿನ ಸಂಬಂಧ ಮಾತನಾಡಬೇಕೆಂದು ವಕೀಲ ರಘುನಂದನ್ ಪತಂಚೇರುವಿನಲ್ಲಿರುವ ತನ್ನ ಕಚೇರಿಗೆ ಕರೆದು ಮತ್ತು ಬರುವ ವಸ್ತುವೊಂದನ್ನು ಕಾಫಿ ಜೊತೆ ನೀಡಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ತಿಂಗಳು ತೆಲಂಗಾಣ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ತಮಗೆ ನ್ಯಾಯ ದೊರಕಿಸಿಕೊಡಿ ಎಂದು ಸಂತ್ರಸ್ತ ಮಹಿಳೆ ನೀಡಿರುವ ದೂರಿನಲ್ಲಿ, ನಾನು ವಕೀಲ ರಘುನಂದನ್ ರಾಜಿ ಮಾಡಿಕೊಳ್ಳದೇ ಹೋದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಹಾಗೂ ತಮಗೆ ನ್ಯಾಯ ಕೊಡಿಸುತ್ತೇನೆ ಎಂದು ಕೇಸ್​ ತೆಗೆದುಕೊಂಡು, ನನ್ನಿಂದ ಲೈಂಗಿಕ ತೃಷೆ ತೀರಿಸಿಕೊಂಡರು ಎಂದು ಮಹಿಳೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ದೂರಿನ ಆಧಾರದ ಮೇಲೆ, ಬಿಜೆಪಿ ವಕ್ತಾರ, ಎಂ. ರಘುನಂದನ್ ವಿರುದ್ಧ ಸಂಬಂಧಿತ ಕಾಯ್ದೆಗಳಡಿ ಅತ್ಯಾಚಾರ, ಬೆದರಿಕೆ, ಬ್ಲ್ಯಾಕ್​ಮೇಲ್​ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆರ್​ಸಿ ಪುರಂ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details