ನವದೆಹಲಿ: ನಮ್ಮ ಮುಖಂಡರು ಬಿಜೆಪಿಯೊಂದಿಗೆ ತಂತ್ರ ರೂಪಿಸಿದ್ದಾರೆ ಎಂಬ ರಾಹುಲ್ ಆರೋಪಕ್ಕೆ ಮಾಜಿ ಸಂಸದೆ ರಮ್ಯಾ ದನಿಗೂಡಿಸಿದ್ದಾರೆ.
CWC ಸಭೆಯ ಪ್ರತಿ ಮಾಹಿತಿಯನ್ನೂ ಕೈ ನಾಯಕರು ಬಹಿರಂಗಪಡಿಸುತ್ತಿದ್ದಾರೆ: ರಮ್ಯಾ ನೇರ ಆರೋಪ
ಟ್ವೀಟ್ ಮೂಲಕ ರಾಹುಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ಕೈ ಮುಖಂಡರು ಕೇವಲ ಪತ್ರವನ್ನು ಮಾತ್ರ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿಲ್ಲ. CWC ಸಭೆಯಲ್ಲಿ ನಡೆಯುತ್ತಿರುವ ಪ್ರತಿ ನಿಮಿಷ - ನಿಮಿಷದ ಸಂಭಾಷಣೆಯನ್ನೂ ಬಹಿರಂಗಪಡಿಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ರಾಹುಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ಕೈ ಮುಖಂಡರು ಕೇವಲ ಪತ್ರವನ್ನು ಮಾತ್ರ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿಲ್ಲ. CWC ಸಭೆಯಲ್ಲಿ ನಡೆಯುತ್ತಿರುವ ಪ್ರತಿ ನಿಮಿಷ - ನಿಮಿಷದ ಸಂಭಾಷಣೆಯನ್ನೂ ಬಹಿರಂಗಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಒಂದು ಹಜ್ಜೆ ಮುಂದೆ ಹೋಗಿ ಮಾತನಾಡಿರುವ ರಮ್ಯಾ, ರಾಹುಲ್ ಅವರು ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಮಾಧ್ಯಮಗಳ ಜೊತೆಗೂಡಿದ್ದಾರೆ ಎಂದು ಹೇಳಬೇಕಿತ್ತು ಎಂದು ರಮ್ಯಾ ಮಾರ್ಮಿಕವಾಗಿ ನುಡಿದಿದ್ದಾರೆ.