ಚೆನ್ನೈ :ನಟ ರಜನಿಕಾಂತ್ ಅವರ ಹೊಸ ಪಕ್ಷದ್ದು ಎಂದು ಹೇಳಲಾಗ್ತಿರುವ ಹೆಸರು ಮತ್ತು ಚಿಹ್ನೆ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ರಜಿನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಈಗಾಗಲೇ ಅಧಿಕೃತಗೊಳಿಸಿದ್ದಾರೆ.
ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸುವುದಾಗಿ ಮತ್ತು ಮುಂಬರುವ ಜನವರಿಯಲ್ಲಿ ಪಕ್ಷಕ್ಕೆ ಚಾಲನೆ ನೀಡುವುದಾಗಿಯೂ ಘೋಷಿಸಿಕೊಂಡಿದ್ದಾರೆ.
ರಜಿನಿ ಹೊಸ ಪಕ್ಷದ ಚಿಹ್ನೆ ಆಟೋರಿಕ್ಷಾ!? :ಪಕ್ಷ ಘೋಷಣೆಗೆ ಮೊದಲು ಪೂರ್ವಭಾವಿಯಾಗಿ ರಜನಿಕಾಂತ್, ರಜಿನಿ ಮಕ್ಕಲ್ ಮಂಡ್ರಂ ಸದಸ್ಯರೊಂದಿಗೆ ಹಲವು ಸಭೆಗಳನ್ನು ನಡೆಸುತ್ತಿದ್ದಾರೆ. ಇದೀಗ ರಜಿನಿ ತಮ್ಮ ಹೊಸ ಪಕ್ಷಕ್ಕೆ 'ಮಕ್ಕೈ ಸೆವಾಯ್ ಕಚ್ಚಿ' ಎಂದು ಹೆಸರಿಟ್ಟಿದ್ದಾರೆ ಮತ್ತು ಹೊಸ ಪಕ್ಷದ ಚಿಹ್ನೆ 'ಆಟೋ ರಿಕ್ಷಾ' ಎಂಬ ಸುದ್ದಿ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಆದರೆ, ಈ ಕುರಿತು ರಜಿನಿಕಾಂತ್ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ರಜಿನಿಯ ಹೊಸ ಪಕ್ಷಕ್ಕೆ ಸಂಬಂಧಿಸಿದ್ದು ಎನ್ನಲಾಗ್ತಿರುವ ಮಾಹಿತಿ ಇದನ್ನೂ ಓದಿ : ಪಕ್ಷ ಕಟ್ಟೋದು ಖಚಿತ, ಸಿಎಂ ಸ್ಥಾನದ ಬಗ್ಗೆ ಯೋಚಿಸಿಲ್ಲ : ತಲೈವಾ ಘೋಷಣೆ
ಇದಕ್ಕೂ ಮುನ್ನ, ಮಕ್ಕಲ್ ಶಕ್ತಿ ಕಝಗಂ ಎಂದು ರಜನಿಕಾಂತ್ ಹೊಸ ಪಕ್ಷಕ್ಕೆ ಹೆಸರಿಟ್ಟಿದ್ದರು ಮತ್ತು ಬಾಬಾ ಮುದ್ರೆಯ ಚಿಹ್ನೆಗಾಗಿ ಮನವಿ ಸಲ್ಲಿಸಿದ್ದರು. ಆದರೆ, ಚುನಾವಣಾ ಆಯೋಗ ಆಟೋ ರಿಕ್ಷಾ ಚಿಹ್ನೆ ನೀಡಿದೆ ಎಂದು ಹೇಳಲಾಗ್ತಿದೆ.