ಕರ್ನಾಟಕ

karnataka

ETV Bharat / bharat

ಬಾಬ್ರಿ ಮಸೀದಿ ಪ್ರಕರಣದಿಂದ ರಾಜೀವ್ ಧವನ್​​ಗೆ ಗೇಟ್​ಪಾಸ್..! - ರಾಜೀವ್ ಧವನ್ ಪೇಸ್​ಬುಕ್ ಪೋಸ್ಟ್

ರಾಜೀವ್ ಧವನ್​, ಸುನ್ನಿ ವಕ್ಫ್ ಬೋರ್ಡ್​ ಸೇರಿದಂತೆ ಹಲವು ಮುಸ್ಲಿಂ ಸಂಘಟನೆ ಪರ ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ.

Rajeev Dhawan sacked from Babri case and he posted in FB
ರಾಜೀವ್ ಧವನ್​​

By

Published : Dec 3, 2019, 9:50 AM IST

ನವದೆಹಲಿ:ಅನಾರೋಗ್ಯ ಕಾರಣ ನೀಡಿ ಬಾಬ್ರಿ ಮಸೀದಿ ಪ್ರಕರಣದಿಂದ ತಮ್ಮನ್ನು ತೆಗೆದು ಹಾಕಿರುವ ಬಗ್ಗೆ ಹಿರಿಯ ವಕೀಲ ರಾಜೀವ್ ಧವನ್ ಫೇಸ್​​ಬುಕ್​ನಲ್ಲಿ ಕಿಡಿಕಾರಿದ್ದಾರೆ.

ತಮ್ಮನ್ನು ಕೇಸ್​ನಿಂದ ದೂರ ಮಾಡಲು ಅನಾರೋಗ್ಯ ಕಾರಣ ನೀಡಲಾಗಿದೆ ಎಂದಿರುವ ರಾಜೀವ್ ಧವನ್​, ಅದು ಸಮರ್ಪಕ ಕಾರಣವಲ್ಲ ಅಸಂಬದ್ಧ ಎಂದು ಹೇಳಿದ್ದಾರೆ.

ಬಾಬ್ರಿ ಮಸೀದಿ ಪ್ರಕರಣ ಅಥವಾ ಪುನರ್​​ ಪರಿಶೀಲನೆಯ ಯಾವುದೇ ವಿಚಾರದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್​ಗೆ ತಿಳಿಸಿದ್ದೇನೆ ಎಂದು ರಾಜೀವ್ ಧವನ್ ಹೇಳಿದ್ದಾರೆ.

ರಾಜೀವ್ ಧವನ್​, ಸುನ್ನಿ ವಕ್ಫ್ ಬೋರ್ಡ್​ ಸೇರಿದಂತೆ ಹಲವು ಮುಸ್ಲಿಂ ಸಂಘಟನೆ ಪರ ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ್ದರು.

ABOUT THE AUTHOR

...view details