ಜೈಪುರ( ರಾಜಸ್ಥಾನ):ಸಚಿನ್ ಪೈಲಟ್ 2ನೇ ಬಾರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಭಾಗಿಯಾಗಿಲ್ಲ. ಎರಡು ದಿನಗಳಲ್ಲಿ 2 ಬಾರಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಇಂದು ಬೆಳಗ್ಗೆ ನಡೆದ ಸಿಎಲ್‌ಪಿ ಸಭೆಯಲ್ಲೂ ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಭಾಗವಹಿಸಲಿಲ್ಲ.
ಸಭೆ ಪ್ರಾರಂಭವಾಗಿತ್ತಿದ್ದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಅವರು ಪೈಲಟ್ ಅವರಿಗೆ ಸಭೆಗೆ ಹಾಜರಾಗುವಂತೆ ಮತ್ತೊಂದು ಮನವಿ ಸಲ್ಲಿಸಿದ್ದರು.
ನಿನ್ನೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮನೆಯಲ್ಲಿ ನಡೆದ ಮೊದಲ ಸಿಎಲ್‌ಪಿ ಸಭೆಯಲ್ಲಿಯೂ ಸಚಿನ್ ಪೈಲಟ್ ಭಾಗವಹಿಸಿರಲಿಲ್ಲ.
ಇತರ ಹದಿನೆಂಟು ಕಾಂಗ್ರೆಸ್ ಶಾಸಕರು ಕೂಡಾ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಇತರ ಪಕ್ಷಗಳ ಸ್ವತಂತ್ರ ಶಾಸಕರು ಭಾಗವಹಿಸಿ, ಗೆಹ್ಲೋಟ್‌ಗೆ ಬೆಂಬಲ ವ್ಯಕ್ತಪಡಿಸಿದರು.
ಇಂದು ನಡೆದ ಸಭೆಯು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಪೈಲಟ್‌ಗೆ ಎರಡನೇ ಅವಕಾಶ ನೀಡಲಾಗಿತ್ತು ಎಂದು ಹೇಳಲಾಗಿದೆ. ಆದರೆ ಪೈಲಟ್ ಹಾಗೂ ಅವರ ಆಪ್ತ ಶಾಸಕರು ಸಭೆಯಲ್ಲಿ ಭಾಗವಹಿಸಲಿಲ್ಲ.