ಕರ್ನಾಟಕ

karnataka

ETV Bharat / bharat

ನೆರವು ಓಕೆ.. ಫೋಟೋ ಯಾಕೆ..?: ರಾಜಸ್ಥಾನ ಸರ್ಕಾರದಿಂದ ಮಹತ್ವದ ನಿರ್ಧಾರ - ಫೋಟೋ

ಕೊರೊನಾ ಸಂಕಷ್ಟದ ಸಮಯದಲ್ಲಿ ಬಡವರಿಗೆ ಆಹಾರ ಮತ್ತು ಪಡಿತರ ನೀಡುವ ವೇಳೆ ಫೋಟೋಗಳನ್ನು ತೆಗೆದಯುವುದನ್ನು ರಾಜಸ್ಥಾನ ಸರ್ಕಾರ ನಿಷೇಧಿಸಿದೆ.

Ashok Gehlot
ಅಶೋಕ್​ ಗೆಹ್ಲೋಟ್

By

Published : Apr 11, 2020, 9:24 PM IST

Updated : Apr 11, 2020, 10:04 PM IST

ಜೈಪುರ (ರಾಜಸ್ಥಾನ): ಕೊರೊನಾ ಸಂಕಷ್ಟದ ವೇಳೆ ಅವಶ್ಯಕತೆ ಇದ್ದವರಿಗೆ ಆಹಾರ ಹಾಗೂ ಅವಶ್ಯಕ ವಸ್ತುಗಳನ್ನು ವಿತರಿಸುವಾಗ ಫೋಟೋ ತೆಗೆದುಕೊಳ್ಳುವುದನ್ನು ರಾಜಸ್ಥಾನ ಸರ್ಕಾರ ನಿಷೇಧಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್ ಕೆಲವರು​ ಪ್ರಚಾರಕ್ಕಾಗಿ ಬಡವರಿಗೆ ಆಹಾರ ಮತ್ತು ಪಡಿತರ ನೀಡುತ್ತಿದ್ದಾರೆ. ಇದನ್ನು ಸೇವೆಯೆಂದು ಭಾವಿಸಬೇಕು, ಪ್ರಚಾರದ ಮಾಧ್ಯಮವಾಗಿ ಬಳಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದರಿಂದಾಗಿ ಆಹಾರ ವಿತರಣೆಯ ಸಂದರ್ಭದಲ್ಲಿ ಫೋಟೋ ತೆಗೆದುಕೊಳ್ಳುವುದನ್ನು ನಿಷೇಧ ಮಾಡಲಾಗಿದೆ ಎಂದ ಗೆಹ್ಲೋಟ್​ ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರೇತರ ಸಂಸ್ಥೆಗಳು ಹಾಗೂ ಇತರ ಸಂಘಟನೆಗಳು ಅವಶ್ಯಕತೆ ಇರುವವರ ನೆರವಿಗೆ ಧಾವಿಸಲು ಜಿಲ್ಲಾಧಿಕಾರಿಗಳು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದರ ಜೊತೆಗೆ ಆಹಾರ ವಿತರಣೆಯ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಿದ್ದಾರೆ.

Last Updated : Apr 11, 2020, 10:04 PM IST

ABOUT THE AUTHOR

...view details