ಕರ್ನಾಟಕ

karnataka

ETV Bharat / bharat

ಭೂಹಗರಣದಲ್ಲಿ ವಾದ್ರಾ ಬೆನ್ನಿಗೆ ನಿಂತಿದ್ದು ರಾಹುಲ್​-ಪ್ರಿಯಾಂಕಾ: ಬಿಜೆಪಿ ಗಂಭೀರ ಆರೋಪ - ಪ್ರಿಯಾಂಕಾ ಗಾಂಧಿ

ರಾಬರ್ಟ್​ ವಾದ್ರಾ ಭೂಹಗರಣದಲ್ಲಿ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ

ರಾಹುಲ್​-ಪ್ರಿಯಾಂಕಾ ಭೂಹಗರಣದ ಆರೋಪ ಮಾಡಿದ ಬಿಜೆಪಿ

By

Published : Mar 15, 2019, 12:15 PM IST

ನವದೆಹಲಿ: ಲೋಕಸಭೆ ಚುನಾವಣೆ ಇನ್ನೇನು ಪ್ರಾರಂಭವಾಗಲಿದ್ದು, ರಾಜಕೀಯ ಹಗ್ಗಜಗ್ಗಾಟ ಮುಂದುವರೆದಿದೆ. ಈ ಮಧ್ಯೆ ಕಾಂಗ್ರೆಸ್ ಮೇಲೆ ಬಿಜೆಪಿ ಗಂಭೀರ ಆರೋಪ ಮಾಡಿದೆ.

ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಉತ್ತರಪ್ರದೇಶ ಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೂಹಗರಣದಲ್ಲಿ ಪಾಲ್ಗೊಂಡಿದ್ದಾರೆ. ರಾಬರ್ಟ್​ ವಾದ್ರಾ ಮಾಡಿರುವ ಹಗರಣಗಳಿಗೆ ರಾಹುಲ್​ ಮತ್ತವರ ಕುಟುಂಬ ಜೊತೆಯಾಗಿ ನಿಂತಿದೆ ಎಂದು ಬಿಜೆಪಿ ಹಿರಿಯ ನಾಯಕರು ಆರೋಪ ಮಾಡಿದ್ದಾರೆ.

ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಹಾಗೂ ಸಚಿವೆ ಸ್ಮೃತಿ ಇರಾನಿ ಗಾಂಧಿ ಕುಟುಂಬ ಬಳಿಯಿರುವ ಭೂಮಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಾಹುಲ್​ ಅಕ್ರಮವಾಗಿ ಭೂಮಿ ಖರೀದಿಸಿ, ತಂಗಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ.

ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒಳಪಟ್ಟ ಹೆಚ್​ಎಲ್​ ಪಾಹ್ವಾ, ಸಂಜಯ್​ ಬಂಡಾರಿ, ಸಿಸಿ ಥಂಪಿ, ಗಾಂಧಿ ಕುಟುಂಬದ ಭೂಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಕೇವಲ 1.5 ಲಕ್ಷಕ್ಕೆ ಕೊಂಡಿದ್ದ ಭೂಮಿಯನ್ನು 3 ವರ್ಷಕ್ಕೆ 84.15 ಲಕ್ಷಕ್ಕೆ ಮಾರಾಟ ಮಾಡಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ರಫೇಲ್ ಡೀಲ್​ನಿಂದಾಗಿ ರಾಹುಲ್​ಗೆ ನಷ್ಟವಾದಂತಿದೆ. ಸಂಜಯ್​ ಭಂಡಾರಿ ಏರ್​ಬಸ್​ ಕಂಪನಿಯ ಮಧ್ಯವರ್ತಿಯಾಗಿದ್ದ. ಇದೇ ಕಂಪನಿ ಏರ್​ಬಸ್​ ಏರೋ ಫೈಟರ್​ಗಳನ್ನು ಪೂರೈಸುವುದಾಗಿ ಟೆಂಡರ್​ನಲ್ಲಿ ಪಾಲ್ಗೊಂಡಿತ್ತು ಎಂದರು.

ಈ ಮೊದಲು ರಾಹುಲ್​ ಹಾಗೂ ಪ್ರಿಯಾಂಕ ವಿರುದ್ಧ ಕಿಡಿ ಕಾರಿದ್ದ ಸಚಿವೆ ಸ್ಮೃತಿ ಇರಾನಿ, ಭೂಹಗರಣದಲ್ಲಿ ವಾದ್ರಾ ಹೆಸರಿರಬಹುದು, ಆದರೆ ನಿಜವಾಗಿ ಅಲ್ಲಿದ್ದದ್ದು ರಾಹುಲ್ ಎಂದಿದ್ದರು.

ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲ, ಇವೆಲ್ಲ ಮೋದಿ ಹಾಗೂ ಅವರ ಬೆಂಬಲಿಗರ ನಿರಾಧಾರ ಆರೋಪಗಳು ಎಂದಿದ್ದಾರೆ.

ABOUT THE AUTHOR

...view details