ನವದೆಹಲಿ:ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿರುವ ಡಿಆರ್ಡಿಒ ವಿಜ್ಞಾನಿಗಳು ಅಭಿನಂದಿಸುವ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಸ್ಮಾರ್ಟ್ ಟ್ವೀಟ್... ಮಿಷನ್ ಶಕ್ತಿ ಶ್ಲಾಘನೆಯಲ್ಲಿ ಮೋದಿ ಕಾಲೆಳೆದ ರಾಗಾ - ಪ್ರಧಾನಿ ಮೋದಿ
ಪ್ರಧಾನಿ ಮೋದಿಯವರಿಗೆ ವಿಶ್ವ ರಂಗಭೂಮಿ ದಿನದ ಶುಭಾಶಯಗಳು ಎಂದು ರಾಗಾ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ
ಮಿಷನ್ ಶಕ್ತಿಯನ್ನು ಯಶಸ್ವಿಗೊಳಿಸಿರುವ ಡಿಆರ್ಡಿಒದ ವಿಜ್ಞಾನಿಗಳ ತಂಡಕ್ಕೆ ಶುಭಾಷಶಯಗಳು. ಪ್ರಧಾನಿ ಮೋದಿಯವರಿಗೆ ವಿಶ್ವ ರಂಗಭೂಮಿ ದಿನದ ಶುಭಾಶಯಗಳು ಎಂದು ರಾಗಾ ಟ್ವೀಟ್ ಮಾಡಿದ್ದಾರೆ.
ಮಿಷನ್ ಶಕ್ತಿ ಯಶಸ್ವಿಯಾಗಿರುವ ಬಗ್ಗೆ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ವಿಜ್ಞಾನಿಗಳ ಕಾರ್ಯವನ್ನು ಭಾಷಣದಲ್ಲಿ ಪ್ರಶಂಸಿಸಿದ್ದಾರೆ. ಮೋದಿ ಭಾಷಣದ ಕೆಲ ಹೊತ್ತಿನಲ್ಲೇ ರಾಹುಲ್ ಗಾಂಧಿ ತಮ್ಮ ಒಂದೇ ಟ್ವೀಟ್ ಮೂಲಕ ಶ್ಲಾಘನೆ ಮತ್ತು ವ್ಯಂಗ್ಯ ಎರಡನ್ನೂ ಮಾಡುವ ಮೂಲಕ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.