ಕರ್ನಾಟಕ

karnataka

ETV Bharat / bharat

ಮೆಹಬೂಬಾ ಮುಫ್ತಿ ಬಂಧನ ಕಾನೂನುಬಾಹಿರ: ರಾಹುಲ್ ಗಾಂಧಿ ಟ್ವೀಟ್​​ - ಜಮ್ಮು ಕಾಶ್ಮೀರ

ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವೀಟ್​ನಲ್ಲಿ ಆಗ್ರಹಿಸಿದ್ದಾರೆ.

Rahul Gandhi
ರಾಹುಲ್​ ಗಾಂಧಿ

By

Published : Aug 2, 2020, 2:34 PM IST

ನವದೆಹಲಿ:ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ಪೀಪಲ್ಸ್​ ಡೆಮಾಕ್ರಟಿಕ್​ ಪಾರ್ಟಿ (ಪಿಡಿಪಿ)ಯ ಅಧ್ಯಕ್ಷೆ ಮೆಹಬೂಬಾ ಮುಫ್ತಿಯ ಬಂಧನದ ಅವಧಿಯನ್ನು ಕೇಂದ್ರ ಸರ್ಕಾರ ಮತ್ತೆ ಮೂರು ತಿಂಗಳು ಹೆಚ್ಚಿಸಿರುವುದು ಕಾನೂನು ಬಾಹಿರ ಎಂದು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್​ ಗಾಂಧಿ, ರಾಜಕೀಯ ನಾಯಕರನ್ನು ಈ ರೀತಿಯಾಗಿ ಬಂಧನದಲ್ಲಿಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ್ದ ವೇಳೆ ಮೆಹಬೂಬಾ ಮುಫ್ತಿಯನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ ಅನ್ವಯ ಬಂಧಿಸಲಾಗಿತ್ತು. ಈಗ ಬಂಧನದ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಣೆ ಮಾಡಲಾಗಿದೆ.

ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅನ್ವಯ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಮತ್ತು ಮಾಜಿ ಸಚಿವ ಸಜಾದ್ ಗಣಿ ಲೋನ್ ಅವರ ಮೇಲೆ ಗೃಹಬಂಧನ ನಿರ್ಬಂಧವನ್ನು ತೆಗೆದುಹಾಕಿ ಮೆಹಬೂಬಾ ಅವರ ಬಂಧನವನ್ನು ವಿಸ್ತರಿಸಲಾಗಿದೆ ಎಂದು ಗೃಹ ಪ್ರಧಾನ ಕಾರ್ಯದರ್ಶಿ ಶಲೀನ್ ಕಬ್ರಾ ಆದೇಶ ಹೊರಡಿಸಿದ್ದಾರೆ.

ಮುಫ್ತಿ ಅವರ ಅಧಿಕೃತ ನಿವಾಸವಾಗಿದ್ದ ಫೇರ್‌ವ್ಯೂ ಅನ್ನು ಜೈಲು ಎಂದು ಘೋಷಿಸಲಾಗಿದ್ದು, ಆಕೆಯನ್ನು ಅಲ್ಲಿಯೇ ದಾಖಲಿಸಲಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ABOUT THE AUTHOR

...view details