ನವದೆಹಲಿ: ದೇಶದಲ್ಲೂ ರುದ್ರತಾಂಡವ ಆಡುತ್ತಿರುವ ಮಹಾಮಾರಿ ಕೊರೊನಾ ಎಲ್ಲ ವಲಯಗಳಲ್ಲೂ ವ್ಯಾಪಿಸಿದ್ದು, ಮಾರುಕಟ್ಟೆ ಮೇಲೆ ಇನ್ನಿಲ್ಲದ ಪರಿಣಾಮ ಬೀರಿದೆ. ಈಗಾಗಲೇ ದೇಶದ ಆರ್ಥಿಕತೆ ಮತ್ತಷ್ಟು ಇಳಕೆಯಾಗಿದ್ದು, ಇದೇ ವಿಷಯವನ್ನಿಟ್ಟುಕೊಂಡು ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟ್ಟೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ನಾನು ಇದನ್ನ ಮತ್ತೊಮ್ಮೆ ಪುನರಾವರ್ತನೆ ಮಾಡುತ್ತಿದ್ದೇನೆ. ಕೊರೊನಾ ವೈರಸ್ ದೊಡ್ಡ ಸಮಸ್ಯೆಯಾಗಿದೆ. ನಿವಾರಣೆ ಮಾಡಲು ಕ್ರಮ ಕೈಗೊಳ್ಳುವ ಬದಲು ಬೇಜವಾಬ್ದಾರಿ ತೋರಲಾಗುತ್ತಿದೆ. ಒಂದು ವೇಳೆ ದೊಡ್ಡ ಮಟ್ಟದ ನಿರ್ಧಾರ ಕೈಗೊಳ್ಳದೇ ಹೋದರೆ ಭಾರತದ ಆರ್ಥಿಕತೆ ಸಂಪೂರ್ಣವಾಗಿ ಹಾಳಾಗಲಿದೆ ಎಂದಿರುವ ರಾಗಾ, ಕೇಂದ್ರ ಸರ್ಕಾರ ಮೂರ್ಖತನದಿಂದ ನಡೆದುಕೊಳ್ಳುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.