ನವದೆಹಲಿ: ದೇಶವು ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತಿರುವುದರಿಂದ ಕೇಂದ್ರವು ಘೋಷಿಸಿರುವ ಹಣಕಾಸು ಪ್ಯಾಕೇಜ್ಅನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರನ್ನು ವಿನಂತಿಸಿಕೊಂಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, 'ಇಂದು ನಮ್ಮ ಬಡ ಜನರಿಗೆ ಹಣ ಬೇಕು. ಈ ಪ್ಯಾಕೇಜ್ಅನ್ನು ಮರುಪರಿಶೀಲಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸುತ್ತಿದ್ದೇನೆ. ಹಣವನ್ನು ನೇರವಾಗಿ ಬ್ಯಾಂಕ್ಗಳಿಗೆ ವರ್ಗಾವಣೆ ಮಾಡುವುದನ್ನು ಪರಿಗಣಿಸಬೇಕು. ನರೇಗಾ ಅಡಿಯಲ್ಲಿ 200 ದಿನಗಳವರೆಗೆ ಕೆಲಸ ಮತ್ತು ನೇರವಾಗಿ ಹಣವನ್ನು ಅವರ ಖಾತೆಗೆ ಜಮೆ ಮಾಡಬೇಕು' ಎಂದು ಮನವಿ ಮಾಡಿದ್ದಾರೆ.