ಕರ್ನಾಟಕ

karnataka

ETV Bharat / bharat

ರಾಹುಲ್‌ ಗಾಂಧಿ 'ಒಳ್ಳೆಯ ನಟ' ಬಾಲಿವುಡ್‌ಗೆ ಹೋಗಿ ಆ್ಯಕ್ಟ್​ ಮಾಡಲಿ; ಬಿಜೆಪಿ ಶಾಸಕ ವ್ಯಂಗ್ಯ

ರಾಹುಲ್‌ ಗಾಂಧಿ ರಾಜಕೀಯ ತೊರೆದು ಮುಂಬೈಗೆ ಹೋಗಿ ಸಿನಿಮಾಗಳಲ್ಲಿ ನಟನೆ ಮಾಡಲಿ. ಕೋವಿಡ್‌-19ನಿಂದಾಗಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಕೈ ನಾಯಕರಿಂದಲೂ ಮತದಾರರು ಅಂತರ ಕಾಯ್ದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಅಣಕವಾಡಿದ್ದಾರೆ.

Rahul Gandhi is 'good actor', should move to Mumbai: Uttar Pradesh BJP MLA
ರಾಹುಲ್‌ ಗಾಂಧಿ 'ಒಳ್ಳೆಯ ನಟ' ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವ್ಯಂಗ್ಯ

By

Published : May 22, 2020, 11:49 PM IST

ಲಖನೌ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒಳ್ಳೆಯ ನಟರಾಗಿದ್ದು, ರಾಜಕೀಯ ತೊರೆದು ಮುಂಬೈಗೆ ಹೋಗಿ ಬಾಲಿವುಡ್‌ ಸಿನಿಮಾಗಳಲ್ಲಿ ನಟನೆ ಮಾಡಲಿ ಎಂದು ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ವ್ಯಂಗ್ಯವಾಡಿದ್ದಾರೆ.

ಕೋವಿಡ್‌-19ನಿಂದಾಗಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಕೈ ನಾಯಕರಿಂದಲೂ ಮತದಾರರು ಅಂತರ ಕಾಯ್ದುಕೊಳ್ಳಬೇಕು. ಕಾಂಗ್ರೆಸ್‌ನಿಂದ ದೇಶವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.

ಆಯೋಧ್ಯೆಯಲ್ಲಿ ರಾಮಜನ್ಮಭೂಮಿ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸಿಂಗ್, ವಾರಣಾಸಿ ಮತ್ತು ಮಥುರಾದಲ್ಲಿನ ದೇವಸ್ಥಾನ, ಮಸೀದಿ ವಿವಾದಲ್ಲೂ ನಾವು ಇದೇ ರೀತಿಯಾದಂತಹ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಬಾಲಿಯಾ ಕ್ಷೇತ್ರದ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details