ಪಾಟ್ನಾ (ಬಿಹಾರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಗೆ ಧನಸಹಾಯ ಮಾಡುತ್ತಿದ್ದು, ಭಾರತದ ಆರ್ಥಿಕತೆ ಉರುಳಿಸಲು ರೈತರ ಬ್ರೇನ್ ವಾಶ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಆರೋಪಿಸಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ಸುಶೀಲ್ ಮೋದಿ, ಹರಿಯಾಣ ಕಿಸಾನ್ ಯೂನಿಯನ್ ರಾಜ್ಯಾಧ್ಯಕ್ಷ ಗುರ್ನಾಮ್ ಸಿಂಗ್ ಅವರು ಕಾಂಗ್ರೆಸ್‌ನಿಂದ 10 ಕೋಟಿ ರೂ. ತೆಗೆದುಕೊಂಡಿರುವ ಆರೋಪ ಸುಳ್ಳಲ್ಲ. ಅದಕ್ಕಾಗಿಯೇ ಅವರನ್ನು ಅಮಾನತು ಮಾಡಲಾಗಿದೆ. ಕೃಷಿ ಕಾನೂನುಗಳ ವಿರೋಧದ ಹೋರಾಟದಲ್ಲಿ ರಾಹುಲ್ ಗಾಂಧಿ ಜೊತೆಗೆ ಬಿಹಾರ ಸಂಸದರು ಇಲ್ಲ. 19 ಸದಸ್ಯರ ಪೈಕಿ ಯಾರೋ ಒಬ್ಬರು ಮಾತ್ರ ಸೇರಿಕೊಂಡಿದ್ದಕ್ಕೆ ಎಲ್ಲರನ್ನು ದೂಷಿಸಲಾಗುವುದಿಲ್ಲ ಎಂದರು.