ಕರ್ನಾಟಕ

karnataka

ETV Bharat / bharat

ಪಂಜಾಬ್​ ಪ್ರಾಂತ್ಯದಲ್ಲಿ ಮತ್ತೊಂದು ಪಾಕ್ ಡ್ರೋನ್ ಪತ್ತೆ..ಪೊಲೀಸರಿಂದ ತನಿಖೆ! - ಪಂಜಾಬ್ ಗಡಿ

ಕಳೆದ ಮೂರು ದಿನಗಳಲ್ಲಿ ಪಂಜಾಬ್​​ನಲ್ಲಿ 2 ಡ್ರೋನ್​ಗಳು ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮತ್ತೊಂದು ಪಾಕ್ ಡ್ರೋನ್ ಪತ್ತೆ

By

Published : Sep 27, 2019, 10:29 PM IST

ಅಟ್ಟಾರಿ (ಪಂಜಾಬ್):ಪಂಜಾಬ್​ ಗಡಿಯಲ್ಲಿ ಮತ್ತೊಂದು ಡ್ರೋನ್​ ಅನ್ನ ಪೊಲೀಸರು ವಶಪಡಿಸಿಕೊಂಡಿದ್ದು, ಮೂರು ದಿನಗಳಲ್ಲಿ ಪತ್ತೆಯಾದ ಎರಡನೇ ಡ್ರೋನ್​ ಇದಾಗಿದೆ.

ಮತ್ತೊಂದು ಪಾಕ್ ಡ್ರೋನ್ ಪತ್ತೆ

ಈ ಮೊದಲು ತರ್ನ ತರಾನ್​ ಎಂಬಲ್ಲಿ ಅರ್ಧ ಸುಟ್ಟುಹೋದ ಡ್ರೋನ್​ಅನ್ನು ವಶಕ್ಕೆ ಪಡೆದಿದ್ದರು. ಪಂಜಾಬ್ ಮತ್ತು ಅಕ್ಕಪಕ್ಕದ ರಾಜ್ಯಗಳ ಮೇಲೆ ಪಾಕಿಸ್ತಾನ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಎಸೆಯುತ್ತಿದೆ. ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹವಾ ಹಳ್ಳಿಯಲ್ಲಿ ಇಂದು ಮತ್ತೊಂದು ಡ್ರೋನ್ ವಶಕ್ಕೆ ಪಡೆಯಲಾಗಿದೆ. ಈಗಾಗಲೆ ಕೆಝಡ್​ಎಫ್​ನ ನಾಲ್ವರು ಉಗ್ರರನ್ನು ಪಂಜಾಬ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರು ನೀಡಿದ ಮಾಹಿತಿ ಮೇರೆಗೆ ಈ ಡ್ರೋನ್​ ​ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಡ್ರೋನ್​ ವಶಕ್ಕೆ ಪಡೆಯುವ ಕಾರ್ಯಾಚರಣೆಯಲ್ಲಿ ಪಂಜಾಬ್​ ಪೊಲೀಸ್​ ತಂಡದೊಂದಿಗೆ ರಾಜ್ಯ ವಿಶೇಷ ಕಾರ್ಯಾಚರಣೆ ಪಡೆಯ ಅಕ್ಷದೀಪ್​ ಸಹ ಜೊತೆಗಿದ್ದರು. ಪಂಜಾಬ್​ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಸರಣಿ ದಾಳಿಗಳನ್ನು ನಡೆಸುವ ಮೂಲಕ ಅಶಾಂತಿ ಸೃಷ್ಟಿಸುವ ಯೋಚನೆಯನ್ನು ಹಾಕಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಉಗ್ರರು ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details