ನವದೆಹಲಿ: ಬಿಜೆಪಿ ಸಂಸದ ಹಾಗೂ ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಕಳ್ಳಭಟ್ಟಿ ದುರಂತದ ತನಿಖೆಯನ್ನು ಪಕ್ಷಾತೀತವಾಗಿ ನಡೆಸಬೇಕೆಂದು, ನ್ಯಾಯಾಂಗೀಯ ತನಿಖೆಗೆ ಪ್ರಕರಣವನ್ನು ವಹಿಸಿರುವುದು ಕಣ್ಣೊರೆಸುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್ನಲ್ಲಿ ನೂರಕ್ಕೂ ಹೆಚ್ಚು ಮಂದಿ ಈ ದುರಂತದಲ್ಲಿ ಸಾವನ್ನಪ್ಪಿದ್ದು, ದೇಶದ ಎಲ್ಲರೂ ದುಃಖಿತರಾಗಿದ್ದಾರೆ ಎಂದು ಸನ್ನಿ ಡಿಯೋಲ್ ಸಿಎಂ ಅಮರೀಂದರ್ ಸಿಂಗ್ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಕಳ್ಳಭಟ್ಟಿ ದುರಂತ: 108ಕ್ಕೇರಿದ ಸಾವಿನ ಸಂಖ್ಯೆ, 37 ಆರೋಪಿಗಳು ಪೊಲೀಸರ ವಶಕ್ಕೆ