ಪುಣೆ: ಕಳೆದೆರಡು ದಿನಗಳಿಂದ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ವರುಣನ ಅಬ್ಬರಕ್ಕೆ ಪುಣೆಯ ಕೊಂಡ್ವಾದಲ್ಲಿ ಮಧ್ಯರಾತ್ರಿ ಪಾರ್ಕಿಂಗ್ ಗೋಡೆಯೊಂದು ಕುಸಿದು ಬಿದ್ದಿದೆ.
ವರುಣನ ಅಬ್ಬರಕ್ಕೆ ಪುಣೆಯಲ್ಲಿ ಕುಸಿದ ಗೋಡೆ... 14 ಮಂದಿ ದುರ್ಮರಣ, ಹಲವರಿಗೆ ಗಾಯ - 14ಮಂದಿ ದುರ್ಮರಣ
ಮಹಾರಾಷ್ಟ್ರದ ಪುಣೆಯಲ್ಲಿ ಮಧ್ಯರಾತ್ರಿ ಗೋಡೆ ಕುಸಿದು ಬಿದ್ದಿದ್ದು, ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಪುಣೆಯಲ್ಲಿ ಕುಸಿದ ಗೋಡೆ
ಗೋಡೆ ಕುಸಿತದಿಂದ ಸ್ಥಳದಲ್ಲೇ 14 ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ತಲುಪಿದ್ದು, ಭರದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Last Updated : Jun 29, 2019, 9:21 AM IST